ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

25-09jvg01
Published on

ಜೇವರ್ಗಿ: ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಆಂದೋಲಾ ಕ್ರಾಸ್ ಬಳಿ ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಆಂದೋಲಾದ ಲಾಲ್ ಅಹ್ಮದ್ ಚೌಕರಿ, ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿಯ ಚಂದ್ರಶೇಖರ ಈರಪ್ಪ ಬಂಧಿತರು. ಎಸ್ಪಿ ಡಾ.ಸೀಮಿ ಮರಿಯಮ್ ಜಾರ್ಜ್​ , ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ತಾಯಪ್ಪ ದೊಡ್ಡಮನಿ, ಸಿಪಿಐ ರಮೇಶ ರೊಟ್ಟಿ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಮಂಜುನಾಥ ಹೂಗಾರ, ಸಂಗಮೇಶ ಅಂಗಡಿ, ಸಿಬ್ಬಂದಿ ಪರಮೇಶ್ವರ, ರಾಜಶೇಖರ, ಕೆಂಚಬಸವ, ಶರಣಬಸಪ್ಪ ಕರೂರ, ಯಲ್ಲಾಲಿಂಗ, ಶ್ರೀಶೈಲ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
10 ಸಾವಿರ ರೂ. ಮೌಲ್ಯದ 1.2 ಕೆಜಿ ಗಾಂಜಾ, 27 ಸಾವಿರದ ಪಿಸ್ತೂಲ್ ಮತ್ತು ಗುಂಡು, 2 ಲಕ್ಷ ಮೌಲ್ಯದ ಕಾರು, 2.94 ಲಕ್ಷ ನಗದು, ಚಿಕ್ಕ ತೂಕದ ಯಂತ್ರ, 3 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net