ಹನೂರು: ತಾಲೂಕಿನ ಕೂಡಲೂರು-ನಾಲ್‌ರೋಡ್ ಮಾರ್ಗದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ತಾಲೂಕಿನ ಕೂಡಲೂರು ಗ್ರಾಮದ ಮಾಧುರಾಜು (40) ಬಂಧಿತ ಆರೋಪಿ. ಈತ ಬುಧವಾರ ಸಂಜೆ ಗ್ರಾಮದಿಂದ ನಾಲ್‌ರೋಡ್ ಕಡೆಗೆ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ಹಾಗೂ ಕೊಳ್ಳೇಗಾಲ ಅಪರಾಧ ವಿಚಕ್ಷಣ ದಳ ನಾಲ್‌ರೋಡ್ ಬಳಿ ದಾಳಿ ನಡೆಸಿ ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. 1 ಕೆ.ಜಿ.840 ಗ್ರಾಂ ಒಣ ಗಾಂಜಾ ಹಾಗೂ ಬೈಕ್ ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಎಎಸೈ ಶಕೀವುಲ್ಲಾ, ಸಿಬ್ಬಂದಿ ರವಿ, ಬಿಳಿಗೌಡ, ಶಿವಕುಮಾರ್ ಹಾಗೂ ಮಹೇಂದ್ರ ಇದ್ದರು.