ಗಾಂಜಾ ಸಾಗಾಟ ಇಬ್ಬರು ಆರೋಪಿಗಳು ವಶಕ್ಕೆ

bkt-07-12
ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಗಂಡಿ ಬಳಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹಿಡಿದ ಪೊಲೀಸರು ಅವರಿಂದ ೬೭೨ ಗ್ರಾಂ ಗಾಂಜಾ ಹಾಗೂ ಬೈಕ್ ಜಪ್ತಿ ಮಾಡಿರುವುದು.
Published on

ಬಾಗಲಕೋಟೆ: ದ್ವಿಚಕ್ರವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕು ಹಾಕಿಕೊಂಡಿರುವ ಇಬ್ಬರ ವಿರುದ್ಧ ಎ-ï‌ಐಆರ್ ದಾಖಲಾಗಿರುವ ಘಟನೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.

ವಿಜಯಪುರ ಜಿಲ್ಲೆಯ ಕೋಲ್ಹಾರ ಕಡೆಯಿಂದ ಬೀಳಗಿ ಪಟ್ಟಣದ ಕಡೆಗೆ ಇಬ್ಬರು ಗಾಂಜಾ ತೆಗೆದುಕೊಂಡು ಬೈಕ್‌ನಲ್ಲಿ ಬರುತ್ತಿದ್ದಾಗ ಬಾಡಗಂಡಿ ಬಳಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಬೈಕ್ ನಲ್ಲಿ ಬರುತ್ತಿದ್ದ ಆರೋಪಿಗಳನ್ನು ತಡೆದ ಪೊಲೀಸರು ಪರಿಶೀಲಿಸಿದಾಗ ಅವರ ಬಳಿ ೬೭೨ ಗ್ರಾಂ ಗಾಂಜಾ ಇರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರು ಗಾಂಜಾ ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೀಳಗಿ ಪಿಎಸ್‌ಐ ಎಚ್.ಬಿ.ಸಣಮನಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಠಾಣೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net