ಗಾಂಜಾ ಸಹಿತ ಆರೋಪಿ ಬಂಧನ

Crime Logo
Published on

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಮಾಲು ಸಮೇತ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದ ರಮೇಶ್ ಯಾನೆ ಕಿಟ್ಟ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ. ತೆರಕಣಾಂಬಿ ಪೊಲೀಸರು 5.5 ಕೆಜಿ ಗಾಂಜಾ ಗಿಡ ಸಹಿತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕೆ.ಎಂ.ಮಹೇಶ್, ಸಿಬ್ಬಂದಿ ಬಂಗಾರನಾಯ್ಕ, ಕೃಷ್ಣ, ರಾಘವೇಂದ್ರಶೆಟ್ಟಿ, ಸಿದ್ದರಾಮ, ಸುರೇಶ್, ಶಿವಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net