ಗಾಂಜಾ ಸಂಗ್ರಹಿಸಿದ್ದ ಮಹಿಳೆ ಬಂಧನ

arrested
Published on

ಮೈಸೂರು: ಗಾಂಜಾವನ್ನು ಮನೆಯಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ನಗರದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರ ಸಿಸಿಬಿ ಪೊಲೀಸರು ಲಷ್ಕರ್ ಮೊಹಲ್ಲಾದ ಮಹಮ್ಮದ್ ಸೇಠ್ ಬ್ಲಾಕ್‌ನಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ.

ಆರೋಪಿಯನ್ನು ಬಂಧಿಸಿ, 26 ಕೆ.ಜಿ. 80 ಗ್ರಾಂ ಗಾಂಜಾ ಮತ್ತು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net