ಗಾಂಜಾ ಸಂಗ್ರಹಿಸಿದ್ದ ಆರೋಪಿ ಸೆರೆ

15 HANUR 3
Published on

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಸಮೀಪದ ಎ ವಿಲೇಜ್‌ನಲ್ಲಿ ಭಾನುವಾರ ಗಾಂಜಾ ಸಂಗ್ರಹಣೆ ಆರೋಪದಡಿ ಪ್ರಕರಣ ದಾಖಲಾಗಿದ್ದ ಆರೋಪಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸಿದ್ದು, ಈತನಿಂದ 1 ಕೆ.ಜಿ 590 ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಗ್ರಾಮದ ನಾಗು ಬಂಧಿತ ಆರೋಪಿ. ತಾಲೂಕಿನ ಚಂಗವಾಡಿ ಬಸ್ ನಿಲ್ದಾಣದಲ್ಲಿ ಜೂ.10 ರಂದು ನಾಗರಾಜು ಎಂಬಾತ ಒಣ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆ ಹನೂರು ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತ ನಾಗರಾಜು ಗಾಂಜಾವನ್ನು ಕುರಟ್ಟಿ ಹೊಸೂರಿನ ಎ ವಿಲೇಜ್‌ನ ನಾಗು ಎಂಬಾತನಿಂದ ಪಡೆಯಲಾಗಿತ್ತು ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಭಾನುವಾರ ಬೆಳಗ್ಗೆ ಇನ್‌ಸ್ಪೆಕ್ಟರ್ ಆನಂದಮೂರ್ತಿ ಹಾಗೂ ಸಿಬ್ಬಂದಿ ಕಾಮರಾಜು, ಚಂದ್ರು, ವಿಶ್ವನಾಥ್ ಹಾಗೂ ರಾಘವೇಂದ್ರ ತಂಡ ದಾಳಿ ನಡೆಸಿ ಆರೋಪಿಯನ್ನು ಗ್ರಾಮದಲ್ಲಿ ಬಂಧಿಸಿದ್ದಾರೆ. 1 ಕೆ.ಜಿ 590 ಗ್ರಾಂ ಒಣ ಗಾಂ ಹಾಗೂ ಬೈಕ್ ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net