ಗಾಂಜಾ ಸಂಗ್ರಹಿಸಿದ್ದ ಅಪರಾಧಿಗೆ 2 ವರ್ಷ ಜೈಲು

f383607e-6cbc-48e2-b166-8ce1f9c61998--05
Published on

ಚಿತ್ರದುರ್ಗ: ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 2 ವರ್ಷಗಳ ಸಜೆ ವಿಧಿಸಿ ಗುರುವಾರ ತೀರ್ಪು ನೀಡಿದೆ. ಚಿತ್ರದುರ್ಗ ತಾಲೂಕು ಬಚ್ಚಬೋರಯ್ಯನಹಟ್ಟಿ ನಿವಾಸಿ ರುದ್ರಯ್ಯ ಶಿಕ್ಷೆಗೆ ಒಳಗಾದ ಅಪರಾಧಿ.
ಅಬಕಾರಿ ಇಲಾಖೆ ಅಧಿಕಾರಿಗಳು,2020 ಆ.5 ರಂದು ರುದ್ರಯ್ಯನ ಮನೆ ಮೇಲೆ ದಾಳಿ ನಡೆಸಿ,1.895 ಕೆಜಿ ಗಾಂಜಾ ವಶಪಡಿಸಿಕೊಂ ಡು ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಅಪರಾಧಿಗೆ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗಣೇಶನಾಯ್ಕ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net