

ಚಾಮರಾಜನಗರ: ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ 7 ಯುವಕರನ್ನು ಪಟ್ಟಣ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನಗರದ ಗಾಳೀಪುರ ಬಡಾವಣೆಯ ನಿವಾಸಿಗಳಾದ ಮಹಮ್ಮದ್ ಹಮೀದ್, ಜಕವುಲ್ಲಾ, ಸೈಯದ್, ಮೊಹಮ್ಮದ್, ಸೈಯದ್ ಮುಬಾರಕ್, ಅಯೂಬ್ ಖಾನ್ ಹಾಗೂ ಸೈಯದ್ ರುಮಾನ್ ಬಂಧಿತ ಆರೋಪಿಗಳು. ಇವರು ಗಾಳೀಪುರ ಬಡಾವಣೆಯ ಮನೆಯೊಂದರಲ್ಲಿ ಸುಮಾರು 42 ಗ್ರಾಂ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ 42 ಗ್ರಾಂ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.