ಗಾಂಜಾ ವಶ

9 ckm 10
ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಸಿಇಎನ್ ಠಾಣೆ ಪೋಲೀಸರು ವಶಪಡಿಸಿಕೊಂಡಿರುವ ಹಸಿ ಗಾಂಜಾ.
Published on

ಚಿಕ್ಕಮಗಳೂರು: ನಗರದ ಟಿಪ್ಪು ನಗರದ ಮನೆಉೊಂದರ ಹಿತ್ತಲಿನಲ್ಲಿ ಬೆಳೆದಿದ್ದ ಸುಮಾರು ೩ ಕೆಜಿ ೯೫೭ ಗ್ರಾಂ ಹಸಿ ಗಾಂಜಾವನ್ನು ಸಿಇಎನ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟಿಪ್ಪು ನಗರದಲ್ಲಿ ವಾಸವಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿ ಗಾಂಜಾ ಗಿಡ ಬೆಳೆಸಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಇಎನ್ ಡಿವೈಎಸ್ ಪಿ ಜೆ.ಎಸ್.ತಿಪ್ಪೇಸ್ವಾಮಿ ನೇತೃತ್ವದ ಪೊಲೀಸರ ತಂಡ ಗಾಂಜಾ ಹಾಗೂ ಗಾಂಜಾ ಬೆಳೆಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಕರ‍್ಯಾಚರಣೆಯಲ್ಲಿ ಸಿಇಎನ್ ಠಾಣೆ ಪಿಎಸ್ಐ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಅನ್ವರ್ ಪಾಷ, ಡಿ.ಬಿ.ಮಂಜುನಾಥ, ಟಿ.ಕೆ.ಹರೀಶ, ಎಚ್.ಕೆ.ಮಹೇಂದ್ರ, ಹರಿಪ್ರಸಾದ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net