ಗಾಂಜಾ ಮಾರುತ್ತಿದ್ದವನ ಸೆರೆ

Published on

ಹೊಸಕೋಟೆ: ತಾಲೂಕಿನ ಕೆ.ಮಲ್ಲಸಂದ್ರದ ಅರಳಿ ಕಟ್ಟೆ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಪೊಲೀಸರು ಮಾಲು ಸಮೇತ ಶುಕ್ರವಾರ ಬಂಧಿಸಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ಸೋಮಸಂದ್ರ ಪಾಳ್ಯದ ಯುವಕ ಗಣೇಶ್ (19) ಬಂಧಿತ. ಸಾರ್ವಜನಿಕರ ಮಾಹಿತಿ ಮೇರೆಗೆ, ಪೊಲೀಸರು ಮಫ್ತಿಯಲ್ಲಿ ಆರೋಪಿಯ ಚಲನವಲನ ಗಮನಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 1 ಕೆಜಿ 100 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಕಲ್ಲಪ್ಪ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net