

ಕಾರವಾರ:ಶಿರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಮೇಲಿನಮಖೇರಿಯ ಮಣಿಕಂಠ ಬಾಬು ರಾಥೋಡ ಬಂಧಿತ. ಆತನಿಂದ 10 ಸಾವಿರ ರೂ. ಮೌಲ್ಯದ 508 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ ಪಿ ವ್ಯಾಲೆಂಟೈನ್ ಡಿಸೋಜಾ, ಇನ್ಸ್ ಪೆಕ್ಟರ್ ಸೀತಾರಾಮ ಪಿ.ನೇತೃತ್ವದಲ್ಲಿ ಪಿಎಸ್ ಐ ಸೋಮನಾಥ ನಾಯ್ಕ, ಸಿಬ್ಬಂದಿ, ಸಚಿನ್ ಮೇಸ್ತ, ರವಿ ಗೌಡ, ವಿವೇಕ ಪಟಗಾರ, ಕುಮಾರ ನಾಯ್ಕ, ಪಿ.ದೇವರಾಜ, ಹನುಮಂತ ಸರೀಕರ್, ಮಾಧವ ನಾಯಕ ದಾಳಿ ನಡೆಸಿದ್ದರು.
.....