ಗಾಂಜಾ ಮಾರುತ್ತಿದ್ದ ಯುವಕ ಬಂಧನ

ganja
Published on

ಕೆ.ಆರ್.ಸಾಗರ: ಕೆ.ಆರ್.ಸಾಗರದ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದ ಯುವಕನನ್ನು ಬಂಧಿಸಿರುವ ಪೊಲೀಸರು, 250 ಗ್ರಾಂ ಗಾಂಜಾ ವಶಪಡಿಕೊಂಡಿದ್ದಾರೆ.


ಕೆ.ಆರ್.ಸಾಗರ ನಿವಾಸಿ ಗೋವಿಂದ ಶಂಭು ಬಂಧಿತ ಆರೋಪಿ. ಜತೆಗಿದ್ದ ಮಹಿಳೆ ಲೀಲಾ ಪರಾರಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸೈ ಬಸವರಾಜು ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದ ಗೋವಿಂದ ಶಂಭುವನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಒಣ ಗಾಂಜಾ ವಶಪಡಿಕೊಂಡಿದ್ದಾರೆ. ಆರೋಪಿಯನ್ನು ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.


ಕಾರ್ಯಚರಣೆಯಲ್ಲಿ ಸಿಬ್ಬಂದಿ ಮಂಜುನಾಥ, ಪ್ರಭು, ಯದುರಾಜ್, ಸತೀಶ, ರೇಣು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net