ಗಾಂಜಾ ಮಾರುತ್ತಿದ್ದ ಮೂವರ ಬಂಧನ

12KWR-Gohil Baireli
Published on

ಕಾರವಾರ: ಶಿರವಾಡ ರೈಲು ನಿಲ್ದಾಣ ಬಳಿ ಗಾಂಜಾ ಮಾರುತ್ತಿದ್ದ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಶಿರವಾಡ ಬಂಗಾರಪ್ಪ ನಗರದ ಕಿಶನ್ ಮೋಹನ ಬಾಂದೇಕರ್(27), ಗೋವಾ ಕಾಣಕೋಣ ನಾಗಶೇಮ್ ಗ್ರಾಮದ ಗಂಗೇಶ ಗಜಾನನ ಫಾತರ ಫೇಕರ (27) ಹಾಗೂ ಕಾಣಕೋಣ ನಾಗಪಲೆಂನ ಗೋಲಿಲ್ ಗಣೇಶ ಬೈರೇಲಿ (29) ಬಂಧಿತರು. ಅವರಿಂದ 20 ಸಾವಿರ ರೂ. ಮೌಲ್ಯದ 1 ಕೆಜಿ 40 ಗ್ರಾಂ ಗಾಂಜಾ, 4 ಲಕ್ಷ ರೂ. ಮೌಲ್ಯದ ವೆಗನಾರ್ ಕಾರು, 1 ಬೈಕ್, 3 ಮೊಬೈಲ್​ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಎನ್​ಇ ಇನ್ಸ್​ಪೆಕ್ಟರ್ ಸೀತಾರಾಮ ಪಿ., ಸಿಬ್ಬಂದಿ ಉಮೇಶ ನಾಯ್ಕ, ನಾಗರಾಜ ನಾಯ್ಕ, ಸುದರ್ಶನ ನಾಯ್ಕ, ಮಂಜುನಾಥ ಹೆಗಡೆ, ಹನುಮಂತ ಕಬಾಡಿ, ಸುರೇಶ ನಾಯ್ಕ, ಶಿವಾನಂದ ತಾನಸಿ, ಶರತ್​ಕುಮಾರ ಬಿ.ಎಸ್., ನಾರಾಯಣ ಎಂ.ಎಸ್., ಭರತೇಶ ಸದಲಗಿ, ಚಂದ್ರಶೇಖರ ಪಾಟೀಲ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net