ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ

images
Published on

ವಿರಾಜಪೇಟೆ: ಪಟ್ಟಣ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.


ತಾಲೂಕಿನ ಕಾಕೋಟುಪರಂಬು ಗ್ರಾಮದ ವಿ.ಆರ್.ಕಿರಣ್ ಕುಮಾರ್ (32), ಸುಂಟಿಕೊಪ್ಪ ಗರಂಗಂದೂರು ಗ್ರಾಮದ ಹಾಲಿ ಪಿರಿಯಾಪಟ್ಟಣದ ಬಿ.ಎಂ.ರಸ್ತೆ ನಿವಾಸಿ ಎಚ್.ಡಿ.ವೇಣುಕುಮಾರ್ (29), ವಿರಾಜಪೇಟೆ ಪಟ್ಟಣ ಅರಸು ನಗರದ ಜೀವನ್ ಕುಮಾರ್ (30), ಪೆರಂಬಾಡಿ ಗ್ರಾಮದ ರಶೀದ್ (32) ಬಂಧಿತರು.


ಆರ್ಜಿ ಗ್ರಾಮದ ಕಿರುಮಕ್ಕಿ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಬಂದ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಬಂಧಿತರಿಂದ 1.650 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು, ಗೂಡ್ಸ್ ಆಟೋ, 990 ರೂ. ಹಾಗೂ 3 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಮತ್ತೊಂದು ಪ್ರಕರಣದಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿ ಬಿಟ್ಟಂಗಾಲದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪರಂಬಾಡಿಯ ರಶೀದ್ ಎಂಬುವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನಿಂದ535 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಒಂದು ಮೊಬೈಲ್ ವಶ ಪಡಿಸಿಕೊಂಡಿದ್ದಾರೆ.


ಪಟ್ಟಣ ಠಾಣಾಧಿಕಾರಿ ಡಿ.ಆರ್.ರವಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಸಿಬ್ಬಂದಿ ಸತೀಶ್, ಜೋನ್ ನಿಶಾಂತ್, ರಾಮಪ್ಪ, ಧರ್ಮ, ವರ್ಗಿಸ್, ಪ್ರವೀಣ್ ಸಾಗರ್, ಮಲ್ಲಿಕಾರ್ಜುನ್, ಗೀರಿಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net