ಗಾಂಜಾ ಮಾರುತ್ತಿದ್ದ ಏಳು ಜನರ ಬಂಧನ

arrested
Published on

ಬೆಳಗಾವಿ: ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಎರಡು ಪ್ರತ್ಯೇಕ ಕಡೆ ಪೊಲೀಸರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿ, 694 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರದ ಶೌರ್ಯ ಸರ್ಕಲ್ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಂಬೇವಾಡಿ ಗ್ರಾಮದ ನವೀನ ಗಲ್ಲಿಯ ನಿವಾಸಿ ಕಿರಣ ಗುಂಡು ಆದವ(21), ಶಿನ್ನೊಳ್ಳಿ ಗ್ರಾಮದ ರಾಹುಲ್ನನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಅಂದಾಜು 2000 ರೂ. ಮೌಲ್ಯ 200 ಗ್ರಾಂ ಗಾಂಜಾ ವಶ ಪಡೆಸಿಕೊಂಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಗಾಂಜಾ ಮಾರಾಟದ ಪ್ರಕರಣದಲ್ಲಿ ನಗರದ ಗೋಡ್ಸೆವಾಡಿ ಪ್ರದೇಶದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಯೋಧ್ಯೆ ನಗರದ ನಿವಾಸಿ ವಿನಾಯಕ ಪ್ರಕಾಶ ಕೊಲ್ಲಾಪುರೆ(29), ಸಂದೇಶ ಶೀತಲ ಗವಾಲಿ(24), ಭವಾನಿ ನಗರದ ನಿವಾಸಿ ಕುಮಾರ ಗೋವಿಂದ ಪೂಜೇರಿ( 39), ರೋಹಿತ ಶಂಕರ ಮುಳವೆ ( 30), ಸೌರಭ ಶ್ರೀಧರ ಸಾತುಸಕರ ಬಂಧಿಸಿ 25,180 ರೂ. ಮೌಲ್ಯದ 494 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ತಿಲಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net