ಗಾಂಜಾ ಮಾರುತ್ತಿದ್ದ 6 ಮಂದಿ ಬಂಧನ

Published on

ಶಿರಾ: ನಗರದ ಪಾರ್ಕ್​ ಮೊಹಲ್ಲಾದ ಗೋಡೌನ್​ನಲ್ಲಿ ಗಾಂಜಾ ಮಾರಾಟ ಮಾರುತ್ತಿದ್ದ 6 ಮಂದಿಯನ್ನು ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದು, ಒಟ್ಟು 1.527 ಕೆ.ಜಿ ಗಾಂಜಾ ಸೊಪು$್ಪ ವಶ ಪಡಿಸಿಕೊಂಡಿದ್ದಾರೆ.

ಸೆಂಟ್ರಿಂಗ್​ ಕೆಸಲಗಾರ ಮುಬಾರಕ್​ ಪಾಷಾ ಅವರ ಗೋಡೌನ್​ನಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು, ಶಿರಾ ನಗರದ ಮುಬಾರಕ್​ ಪಾಷಾ(32), ಮುಜಾಹಿದ್​ ಖಾನ್​ (23), ಗಾಡಿವಾನ್​ ಮೊಹಲ್ಲಾದ ಕಡ್ಡಿ ಮೆಹಬೂಬ್​ ಪಾಷಾ(25) ಅರ್ಪತ್​ ಖಾನ್​ (21), ಗಾಡಿವಾನ್​ ಮೊಹಾಲ್ಲಾದ ದಾದು ದಾದಾಪೀರ್​(32) ಸಾಯಿ ಹೋಟೆಲ್​ ಹಿಂಬಾಗದ, ಬೇಗಂ ಮೊಹಲ್ಲಾ, ಹಯಾತ್​ ಖಾನ್​(26) ಬಂಧಿತ ಆರೋಪಿಗಳು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರ ಠಾಣೆ ಇನ್​ಸ್ಪೆಕ್ಟರ್​ ಮಂಜೇಗೌಡ ನೇತೃತ್ವದಲ್ಲಿ ಸಿಬ್ಬಂದಿ ನಾಗರಾಜ, ಅಬ್ದುಲ್​ ಖಲೀಲ್​, ರಂಗನಾಥ, ಮಂಜುನಾಥ ಸ್ವಾಮಿ, ಸಿದ್ದೇಶ್​ ಕಾರ್ಯಾಚರಣೆ ನಡೆಸಿದ್ದರು. ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಎಸ್​.ಪಿ ಕೆ.ವಿ.ಅಶೋಕ್​ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net