

ಕಲಬುರಗಿ: ನಗರದ ಸೂಪರ್ ಮರ್ಕೆಟ್ನ ಕಾರ್ ಪರ‍್ಕಿಂಗ್ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಮೂರು ೪೮ ಮೌಲ್ಯದ ಮೂರು ಕೆ.ಜಿ.ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ಬೈಕ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ತಡಕಲ್ ಗ್ರಾಮದ ಶ್ರೀಕಾಂತ ಸಿರಸೆ, ಸಿದ್ದರಾಮ ಪೂಜಾರಿ, ಮಹಾಗಾಂವ ಕ್ರಾಸ್ನ ರೋಷನ ಪಂಡಿತ ಸಗರ, ಗೊಲ್ಲರಗಲ್ಲಿಯ ದರ‍್ಗೇಶ ಯಾದವ ಬಂಧಿತ ಆರೋಪಿಗಳು. ಪಿಐ ಸೋಮಲಿಂಗ ಕಿರದಳ್ಳಿ ನೇತೃತ್ವದಲ್ಲಿ ಪಿಎಸ್ಐ ಸುಭಾಷಚಂದ್ರ, ಎಸ್ಐ ಬಸವರಾಜ, ಸಿಬ್ಬಂದಿ ಶಿವಪ್ರಕಾಶ, ಕೇಸುರಾಯ, ರಾಮು ಪವಾರ, ಶಶಿಕಾಂತ, ನವೀನ್ಕುಮಾರ ಅವರ ತಂಡ ಕರ‍್ಯಾಚರಣೆ ನಡೆಸಿ, ಬಂಧಿಸಿದೆ.