ಗಾಂಜಾ ಮಾರಾಟಗಾರನ ಬಂಧನ

Published on

ಕುಣಿಗಲ್​:- ಪಟ್ಟಣದ ಅಂಬೇಡ್ಕರ್​ ಕಾಲನಿಯಲ್ಲಿ ನಿಮಾರ್ಣ ಹಂತದ ಖಾಸಗಿ ಕಟ್ಟಡದಲ್ಲಿ ಗುರುವಾರ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿ 62 ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅಂಬೇಡ್ಕರ್​ ಕಾಲನಿ ನಿವಾಸಿ ಸಚಿನ್​ (35) ಬಂಧಿತ. ಈತ ಕಾಲನಿಯ ನಿಮಾರ್ಣ ಹಂತದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಿಪಿಐ ಸುನಂದಾ, ಪಿಎಸ್​ಐ ಸಂದೀಪ್​ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದ್ದಾರೆ. 870 ಗ್ರಾಂ ಗಾಂಜಾ ಹಾಗೂ ಮೊಬೈಲ್​ ಸೇರಿದಂತೆ ಸುಮಾರು 62 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು, ಮನೆ ಮಾಲೀಕ ಸೇರಿದಂತೆ ಆರಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net