ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Crime Logo
Published on

  ಹಾಸನ: ನಗರದ ದೇವರಾಯಪಟ್ಟಣದ ಹತ್ತಿರ ಇರುವ ರೇಷ್ಮೆ ಇಲಾಖೆಯ ಪಕ್ಕದ 80 ಅಡಿ ರಸ್ತೆಯಲ್ಲಿ ಆಲ್ಟೋ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ನಗರ ಪೊಲೀಸ್ ಠಾಣೆಯ ಇನ್ಸೆಪೆಕ್ಟರ್ ರೇವಣ್ಣ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಮಂಗಳವಾರ ಸಂಜೆ ಬಂಧಿಸಿದ್ದಾರೆ.

ತಣ್ಣೀರುಹಳ್ಳ ರಾಘವೇಂದ್ರ ನಗರದ ಆಟೋ ಚಾಲಕ ಮೊಹಮ್ಮದ್ ಸುಬಾನ್ (30) ಹಾಗೂ ಹಳೇಬೀಡಿನ ಸಾದಿಕ್ ಷರೀಫ್ (44) ಬಂಧಿತ ಆರೋಪಿಗಳು. ಇಬ್ಬರು ಆಲ್ಟೋ ಕಾರನ್ನು ನಿಲ್ಲಿಸಿಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಸುಮಾರು 80 ಸಾವಿರ ರೂ. ಬೆಲೆ ಬಾಳುವ 1.2 ಕೆ.ಜಿ. ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ಗಾಂಜಾ ಹಾಗೂ ಕಾರು ಜತೆಗೆ 25 ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net