ಗಾಂಜಾ ಮಾರಾಟ ಇಬ್ಬರ ಬಂಧನ

ganja
Published on

ಚಿತ್ರದುರ್ಗ: ಅಕ್ರಮ ಗಾಂಜಾ ಸಾಗಾಣಿಕೆ ಸಂಬಂಧ ಕೋಟೆ ಠಾಣೆಯ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದು, 35 ಸಾವಿರ ರೂ. ಮೌಲ್ಯದ 1ಕೆ.ಜಿ 155 ಗ್ರಾಂ ತೂಕದ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.

ನಗರದ ಆಶ್ರಯ ಬಡಾವಣೆಯ ಮನೆಯೊಂದರಲ್ಲಿ ಗಾಂಜಾ ಸೊಪ್ಪುಗಳನ್ನು ಶೇಖರಿಸಿಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಡಿವೈಎಸ್ಪಿ ದಿನಕರ್, ಪಿಐ ಪ್ರಕಾಶಗೌಡ ಪಾಟೀಲ ಮತ್ತು ಸಿಬ್ಬಂದಿ ಒಳಗೊಂಡ ತಂಡ ದಾಳಿ ನಡೆಸಿದೆ.

ಶೌಕತ್ ಆಲಿ, ಮಹಮದ್ ಆಸೀಫ್ ಆರೋಪಿತರು. ಇದೇ ಪ್ರಕರಣ ಸಂಬಂಧ ಇನ್ನೂ ಐವರು ಆರೋಪಿತರು ಪರಾರಿಯಾಗಿದ್ದಾರೆ.

ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಕಾರ್ಯವೈಖರಿಗೆ ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಪ್ರಭಾರ ಎಎಸ್ಪಿ ಉಮೇಶ್ ಈಶ್ವರ್ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net