ಗಾಂಜಾ ಮಾರಲು ಯತ್ನಿಸಿದ ನಾಲ್ವರ ಬಂಧನ

Published on

ಕೊರಟಗೆರೆ: ಗಾಂಜಾ ಸೊಪ್ಪು ಮತ್ತು ಪಾಕೆಟ್​ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರ ಜಿಲ್ಲೆಯ 4 ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬೈಲಾಂಜನೇಯ ದೇವಾಲಯದ ಸಮೀಪ ಶುಕ್ರವಾರ ಬಂಧಿಸಿದ್ದಾರೆ.

ಹುಬ್ಬಳ್ಳಿಯ ಚೇತನ್​(28), ತುಮಕೂರು ತಾಲೂಕು ಊರುಕೆರೆಯ ಸಿಂಗರವೇಲು(29), ಪ್ರೀತಮ್​(26), ಪಾವಗಡದ ನಾಗರಾಜ ಬಂಧಿತ ಆರೋಪಿ. ಕೊರಟಗೆರೆ ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹಗಲಿನಲ್ಲೇ ಗಾಂಜಾ ಸೊಪ್ಪು ಮತ್ತು ಪಾಕೆಟ್​ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ತೂಕದ ಮಿಷನ್​ ಹಾಗೂ 960 ಗ್ರಾಂ ಗಾಂಜಾ ಸೊಪ್ಪಿನ ಜತೆ 4 ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಲಬುರಗಿಯ ಸಹಾಪುರದಿಂದ ಗಾಂಜಾಸೊಪ್ಪು ತಂದು ತುಮಕೂರು ಮತ್ತು ಕೊರಟಗೆರೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

5 ಗ್ರಾಂ ಪಾಕೆಟ್​ಗೆ 500 ರೂ.: ದ್ವಿಚಕ್ರ ವಾಹನದಲ್ಲಿ ಬರುವ ಮಾರಾಟಗಾರರು ಜತೆಯಲ್ಲಿ ತೂಕದ ಮಿಷನ್​ ಜತೆ ಗಾಂಜಾದ ಸೊಪು$್ಪ ತಂದು 5ಗ್ರಾಂ. ಗೆ 500ರೂ. ನಂತೆ ಸ್ಥಳದಲ್ಲಿಯೇ ನಗದು ಹಣ ಪಡೆದು ಪಾಕೆಟ್​ ರೂಪದಲ್ಲಿ ಮಾರಾಟ ಮಾಡುತ್ತಿದ್ದರು. ಕೊರಟಗೆರೆ ಸಿಪಿಐ ಅನಿಲ್​ ಮತ್ತು ಪಿಎಸೈ ಚೇತನ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಅಶೋಕ್​, ಮಧುಗಿರಿ ಡಿವೈಎಸ್ಪಿ ರಾಮಚಂದ್ರಯ್ಯ ಭೇಟಿ ನೀಡಿ ಪರಿಶೀಲಿಸಿ ಮತ್ತೋರ್ವ ಆರೋಪಿಯ ವಶಕ್ಕೆ ಸೂಚಿಸಿದ್ದಾರೆ. ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net