ಗಾಂಜಾ ಬೆಳೆದಿದ್ದವನ ಬಂಧನ

17mdk09
Published on

ಕುಶಾಲನಗರ: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶೈಲಜಾ ಬಡಾವಣೆಯಲ್ಲಿರುವ ಸ್ಮಶಾನ ಜಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹೇರೂರು ಗ್ರಾಮದ ನಿವಾಸಿ ಪ್ರಶಾಂತ್ (29) ಬಂಧಿತ ಆರೋಪಿ. ಆರೋಪಿಯಿಂದ 1 ಕೆ.ಜಿ. 730 ಗ್ರಾಂ ತೂಕದ 19 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಟೌನ್ ಪಿಐ ಬಿ.ಜಿ.ಪ್ರಕಾಶ್, ಪಿಎಸ್‌ಐ ಗೀತಾ, ಸಿಬ್ಬಂದಿ ಹಾಗೂ ಡಿಸಿಆರ್‌ಬಿ ಸಿಬ್ಬಂದಿ ವಿಶೇಷ ತಂಡ ಪಾಲ್ಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net