

ಹನಗೋಡು: ಸಮೀಪದ ತಟ್ಟೆಕೆರೆ ಗ್ರಾಮದಲ್ಲಿ ಮನೆ ಹಿಂಭಾಗದಲ್ಲಿನ ಹೂವಿನ ಗಿಡಗಳ ನಡುವೆ ಬೆಳೆದಿದ್ದ ಎರಡು ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದಿರುವ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದ ನಿವಾಸಿ ವಿಶ್ವನಾಥ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಮಹೇಶ್ ಹಾಗೂ ಇನ್ಸ್‌ಪೆಕ್ಟರ್ ರವಿ ಮಾರ್ಗದರ್ಶನದಂತೆ ಎಸ್‌ಐ ರಾಮಚಂದ್ರಪ್ಪ ನೇತೃತ್ವದಲ್ಲಿ ಸೋಮವಾರ ಸಂಜೆ ದಾಳಿ ನಡೆದಿದೆ. ಈ ವೇಳೆ ಮನೆ ಪಕ್ಕದಲ್ಲಿ ಒಂದು ಹಾಗೂ ಮನೆ ಹಿಂಭಾಗದಲ್ಲಿ ಒಂದು ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಗಿದ್ದು, 5ರಿಂದ 6 ಅಡಿ ಎತ್ತರವಿದೆ. ಬಳಿಕ ವಿಶ್ವನಾಥ್‌ನನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮೆಹರಾಜ್, ಮಂಜು, ಇಮ್ರಾನ್, ಚಾಲಕ ಸುಂದರ್ ಮತ್ತಿತರರಿದ್ದರು.