ಗಾಂಜಾ ದಂಧೆಕೋರರಿಂದ ಪೊಲೀಸರ ಮೇಲೆ ದಾಳಿ, ಸಿಪಿಐ ಕೋಮಾಕ್ಕೆ

IMG-20220924-WA0013
Published on

ಕಲಬುರಗಿ : ಗಾಂಜಾ ದಂಗೆಕೋರರನ್ನು ಮೂಲ ಬೇದಿಸಲು‌‌ ನೆರೆಯ ಮಹಾರಾಷ್ಟ್ರ ಕ್ಕೆ ತೆರಳಿದ್ದ ಕಲಬುರಗಿ ಜಿಲ್ಲೆಯ ಪೊಲೀಸರ ಮೇಲೆ ದಂಧೇಕೋರರ ಗ್ಯಾಂಗ್ ದಾಳಿ ಮಾಡಿದೆ.

ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ಕೋಮಾ ಸ್ಥಿತಿಯಲ್ಲಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆಯ ಗ್ರಾಮೀಣ ವೃತ್ತದ ಪೊಲೀಸರು ಸಂತೋಷ ಎಂಬಾತನ ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದರು. ಆತ ನೀಡಿದ ಮಾಹಿತಿಯಂತೆ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಹತ್ತು ಪೊಲೀಸರ ತಂಡ ಉಮರ್ಗಾ ತಾಲೂಕಿನ ತರೂರಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿನ ಹೊಲದಲ್ಲಿ ಗಾಂಜಾ ಬೆಳೆಯುತ್ತಿದ್ದ ಜಮೀನಿನಲ್ಲಿ ದಾಳಿ ಮಾಡಿದಾಗ 30-40 ಜನರಿದ್ದ ನಶೆ ದಂಗೆಕೋರರು ಪೊಲೀಸರ ಮೇಲೆ‌ ಕಲ್ಲು ತೂರಿದ್ದಾರೆ. ಬಡಿಗೆ ಇನ್ನಿತರ ಮಾರಕಾಸ್ತ್ರಗಳಿಂದ ದಾಳಿ ‌ಮಾಡಿದಾಗ ಇಲ್ಲಾಳ ಪ್ರಾಣ ರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿದ್ದಾರೆ. ಈ ವೇಳೆ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ.

ಇಲ್ಲಾಳ ಸಿಕ್ಕು ಬಿದ್ದಾಗ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ತಪ್ಪಿಸಿಕೊಂಡು ಹೋದ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರ ದೊಂದಿಗೆ ದೌಡಾಯಿಸಿ ಅವರನ್ನು ಆಸ್ಪತ್ರೆಗೆ ಸಾಗಿದರು.
ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಸಲಾಯಿತು.

ಎಸ್ಪಿ ಇಶಾ ಪಂತ್, ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಇತರರು ಆಸ್ಪತ್ರೆಗೆ ಭೇಟಿ ನೀಡಿದರು. ಕುಟುಂಬದ ಸದಸ್ಯರಿಗೆ ದೈರ್ಯ ತುಂಬಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net