ಬಳ್ಳಾರಿ : ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡವವಿಧಿಸಿ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲವು ಆದೇಶ ನೀಡಿದೆ.
ಸಿರುಗುಪ್ಪ ತಾಲೂಕಿನ ಬೈರಗಾಮ ನಿವಾಸಿ ಕಾಲಪ್ಪ ಶಿಕ್ಷೆಗೆ ಗುರಿಯಾದ ಆರೋಪಿ. 2020ರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾಳಪ್ಪ ತನ್ನ ಜಮೀನಿನಲ್ಲಿ ಬೆಳೆಸಿದ್ದ 54 ಗಾಂಜಾ ಗಿಡಗಳನ್ನು ಬೆಳೆಸಿದ್ದನ್ನು ಪತ್ತೆ ಹೆಚ್ಚಿದ್ದರು. ಒಟ್ಟು 31,700 ಕಿಲೋ ಗ್ರಾಂ ನಷ್ಟು ಗಾಂಜಾ ಪತ್ತೆ ಹಚ್ಚಿದ್ದರು. ಪ್ರಕರಣದ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳಾದ ಆರ್. ಗಂಗಾಧರ ಹಾಗೂ ಮೌನೇಶ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ-ವಿವಾದ ಪರಿಶೀಲಿಸಿದ ಜಿಲ್ಲಾ ನ್ಯಾಯಧೀಶೆ ಕೆ.ಜಿ.ಶಾಂತ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಬಿ.ಸುಂಕಣ್ಣ ವಾದ ಮಂಡಿಸಿದ್ದರು.