ಗಾಂಜಾ ಆರೋಪಿಗೆ 4ವರ್ಷ ಕಠಿಣ ಶಿಕ್ಷೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಚಿತ್ರದುರ್ಗ: ಗಾಂಜಾ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಿಂಚೇರಿ ಗ್ರಾಮದ ಬೊಮ್ಮಯ್ಯನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಘಟನೆ ಹಿನ್ನೆಲೆ: ಮೊಳಕಾಲ್ಮುರು ತಾಲೂಕಿನ ಬೈರಾಪುರ ಗ್ರಾಮದಿಂದ ಉಚ್ಚಂಗಿದುರ್ಗ ಗ್ರಾಮಕ್ಕೆ ಸಂಪರ್ಕಿಸುವ ನಾಗಸಮುದ್ರ ತಿರುವು ಬಳಿ ಆರೋಪಿ ಬೊಮ್ಮಯ್ಯ ಅಕ್ರಮವಾಗಿ ಹೂ, ತೆನೆ, ಬೀಜಗಳಿಂದ ಕೂಡಿದ 1.35 ಕೆ.ಜಿ ಗಾಂಜಾವನ್ನು ಮಾರಾಟ ಮಾಡಲು ಮುಂದಾಗಿದ್ದ. ಈ ವೇಳೆ ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಒಣ ಗಾಂಜಾ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶೆ ಬಿ.ಕೆ.ಗೀತಾ ಅವರು ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಗಣೇಶ್‌ನಾಯ್ಕ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net