

ತೇರದಾಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ಯೋಜನೆ ಆ. 30 ರಂದು ಮೈಸೂರಿನಲ್ಲಿ ಸಿಎಂ ಚಾಲನೆ ನೀಡಲಿದ್ದು, ಕಾರ್ಯಕ್ರಮ ವೀಕ್ಷಣೆ ಹಾಗೂ ಸಂವಾದಕ್ಕೆ ತೇರದಾಳ ಪುರಸಭೆ ವ್ಯಾಪ್ತಿಯ ದೇವರಾಜ ನಗರದ ಬಾಬು ಜಗಜೀವನ್‌ರಾಂ ಸಮುದಾಯ ಭವನ, ಗುರುದೇವ ಬ್ರಹ್ಮಾನಂದ ಆಶ್ರಮ ಹಾಗೂ ಪುರಸಭೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯ ನಿರ್ದೇಶನದಂತೆ ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಸಿಎಂ ಜತೆಗೆ ಸಂವಾದ ನಡೆಸಲು ಕೂಡ ಅವಕಾಶವಿದೆ. ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಇದುವರೆಗೆ 5825 ಅರ್ಜಿಗಳು ಸ್ವೀಕೃತಗೊಂಡಿವೆ. ಅರ್ಜಿದಾರರು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮ ಕುರಿತು ತಿಳಿಸಲು ಪುರಸಭೆ ಸದಸ್ಯರಿಗೆ ಹೇಳಲಾಗಿದೆ. ಕರಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆಯಲ್ಲದೆ, ಘನತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಪ್ರಚಾರವೂ ನಡೆಸಲಾಗಿದೆ ಎಂದು ತಿಳಿಸಿದರು.
ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಅಭಿಯಂತರ ಎಸ್.ಬಿ. ಮಾತಾಳಿ, ಪ್ರತಾಪ ಕೊಡುಗೆ ಇದ್ದರು.