

ಮೈಸೂರು: ಯುಗಾದಿ ಹಬ್ಬದ ದಿನದಂದು ಕೆ.ಜಿ.ಕೊಪ್ಪಲಿನ ಬಾರ್‌ವೊಂದರ ಬಳಿ ಹಣಕಾಸು ವಿಷಯಕ್ಕೆ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ.
ಗಾಯಗೊಂಡಿರುವ ಕೆ.ಜಿ.ಕೊಪ್ಪಲಿನ ನಿವಾಸಿ ಉಮೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗದೆ.
ಹಲ್ಲೆ ನಡೆಸಿದ ಅರ್ಜುನ್ ಎಂಬಾತನನ್ನು ಬಂಧಿಸಿದ್ದು, ಇತರ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆದಿದೆ.
ಹಣಕಾಸು ವಿಷಯಕ್ಕಾಗಿ ಯುವಕರ ನಡುವೆ ಜಗಳ ಶುರುವಾಗಿದೆ. ಇದನ್ನು ಬಿಡಿಸಲು ಉಮೇಶ್ ಹೋಗಿದ್ದಾರೆ. ಆಗ ಇವರ ಮೇಲೆ ಯುವಕ ಗುಂಪು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.