ಗರ್​ಹುಕುಂ ರೈತರ ಧರಣಿ ಅಂತ್ಯ: ಜಂಟಿ ಸಭೆ ಮಾಡುವುದಾಗಿ ಜಿಲ್ಲಾಧಿಕಾರಿ ಲಿಖಿತ ಭರವಸೆ

2
Published on

ತುಮಕೂರು: ಜಂಟಿ ಸರ್ವೇ ಹಾಗೂ ಜಂಟಿ ಸಭೆ ನಡೆಸಲು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಭರವಸೆ ಹಿನ್ನೆಲೆಯಲ್ಲಿ ಬಗರ್​ಹುಕುಂ ರೈತರ ಅರ್ನಿದಿಷ್ಟಾವಧಿ ಧರಣಿ ಶುಕ್ರವಾರ ಅಂತ್ಯಗೊಳಿಸಲಾಯಿತು.

ಕಳೆದ ಬುಧವಾರದಿಂದ ಕರ್ನಾಟಕ ಪ್ರಾಂತ ರೈತ ಸಂದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಗರ್​ಹುಕಂ ಸಾಗುವಳಿದಾರರ ಅರ್ನಿದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿತ್ತು.

ಅರಣ್ಯ ಇಲಾಖೆ ಜತೆ ತಕರಾರು ಇರುವ ಎಲ್ಲ ಬಗರ್​ ಹುಕಂ ಸಾಗುವಳಿ ಜಮೀನಿನ ರೈತರ ಸ್ವಾಧಿನ ರಸಲು ಜಂಟಿ ಸರ್ವೇ ಹಾಗೂ ಜಂಟಿ ಸಭೆ ಮಾಡುವುದಾಗಿ ಜಿಲ್ಲಾಧಿಕಾರಿ ಲಿಖಿತ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಭಟನೆ ಧರಣಿ ವಾಪಸ್​ ಪಡೆಯಲಾಯಿತು.

ಪ್ರತಿಭಟನಾನಿರತರು ಒದಗಿಸಿರುವ ಗ್ರಾಮ ಹಾಗೂ ಸರ್ವೇ ನಂಬರ್​ಗಳ ಜಮೀನುಗಳ ಜಂಟಿ ಸರ್ವೇ ನಡೆಸಿ ಅರಣ್ಯ ಇಲಾಖೆಯಿಂದ ಯಾವುದೇ ಕಿರುಕುಳ ಆಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದರು. ಜಂಟಿ ಸರ್ವೆ ಆಗುವವರೆಗೆ ಹಾಗೂ ಕಂದಾಯ ಇಲಾಖೆಗೆ ವರ್ಗಾಯಿಸಿರುವ ಡೀಮ್ಡ್​ ಆರಣ್ಯದ ವ್ಯಾಪ್ತಿ ಪ್ರಮಾಣ , ಗಡಿ ಗುರುತಿಸುವವರೆಗೆ ರೈತರ ಮೇಲೆ ದೌರ್ಜನ್ಯ ನಡೆಸದಂತೆ ಅರಣ್ಯ ಇಲಾಖೆ ನಿರ್ಭಂದಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂ ರಾಜ್ಯ ಸಹ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದರು.

ಅರಣ್ಯ ಇಲಾಖೆ ಮೂಲಕ ಕಿತ್ತುಕೊಂಡಿರುವ ಬಗರ್​ ಹುಕಂ ಸಾಗುವಳಿ ಭೂಮಿ ಮರಳಿಸಲು, ಸಾಗುವಳಿ ಮಂಜೂರಾತಿ ಆದೇಶ ಪಡೆದಿರುವ ಎಲ್ಲಾ ಬಗರ್​ಹುಕುಂ ಸಾಗುವಳಿದಾರರಿಗೆ ದುರಸ್ತ್​ ಮಾಡಿಸಿ ಪಹಣಿ ವಿತರಿಸಲು, ಬಗರ್​ ಹುಕಂ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಇರುವ ಅವಕಾಶ ವಿಸತರಿಸಬೇಕು ಎಂದರು. ಹೇಮಾವತಿ ನಾಲೆ, ರಾಷ್ಟ್ರೀಯ ಹೆದ್ದಾರಿ, ಎತ್ತಿನಹೊಳೆ, ರೈಲ್ವೆ ಮುಂತಾದ ಯೋಜನೆಗಳಿಗೆ ಭೂ ಸ್ವಾಧಿನಕ್ಕೆ ಒಳಗಾದ ಬಗರ್​ಹುಕುಂ ಸಾಗುವಳಿದಾರರು ಸೇರಿ ಎಲ್ಲ ರೈತರಿಗೆ ಪರಿಹಾರದ ಹಣ ವಿತರಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂ ಜಿಲ್ಲಾ ಸಂಚಾಲಕ ಅಜ್ಜಪ್ಪ, ಮುಖಂಡರಾದ ಎನ್​.ಕೆ.ಸುಬ್ರಹ್ಮಣ್ಯ, ನರಸಿಂಹಮೂರ್ತಿ, ದೊಡ್ಡನಂಜಯ್ಯ, ಬಸವರಾಜು, ಯಾದವಮೂರ್ತಿ, ಲೋಕೇಶ್​, ಆರ್​ ಎಸ್​ ಚನ್ನಬಸವಣ್ಣ ,ಮಾರುತಿ ಕೆಆರ್​, ಮೂಡ್ಲಪ್ಪ, ಗೌರಮ್ಮ, ನಾಗರಾಜು, ಕರಿಬಸವಯ್ಯ, ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net