ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

klb5
ಆಳಂದ ತಾಲೂಕಿನ ಕಡಗಂಚಿಯಲ್ಲಿ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆಯಲ್ಲಿ ಗರ್ಭಿಣಿಯರಿಗೆ ಉಡಿ ತುಂಬಲಾಯಿತು. ಶ್ರೀಕಾಂತ ಮೇಗಂಜಿ, ಇಂದುಮತಿ ಮಾದಗೊಂಡ, ಪದ್ಮಾವತಿ ಬಿರಾದಾರ ಇತರರಿದ್ದರು.
Published on

ಆಳಂದ: ಗರ್ಭಿಣಿಯರು, ಮಕ್ಕಳಲ್ಲಿನ ರಕ್ತಹೀನತೆ ಮತ್ತು ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಪೋಷಣ ಅಭಿಯಾನ ಆಯೋಜಿಸಲಾಗಿದೆ. ಬಾಣಂತಿಯರು ಪೌಷ್ಟಿಕ ಆಹಾರ ಹೆಚ್ಚೆಚ್ಚು ಸೇವಿಸಿ ಆರೋಗ್ಯದಿಂದ ಇರಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಕಾಂತ ಮೇಂಗಜಿ ಹೇಳಿದರು. ಕಡಗಂಚಿಯ ಶ್ರೀ ಶಾಂತಲಿAಗೇಶ್ವರ ಸಂಸ್ಥಾನ ಮಠದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆ, ಗರ್ಭಿಣಿಯರಿಗೆ ಉಡಿ ತುಂಬುವುದು ಮತ್ತು ತಾಯಿಗೊಂದು ಗಿಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಗ್ರಾಪಂ ಅಧ್ಯಕ್ಷೆ ಇಂದುಮತಿ ಮಾದಗೊಂಡ, ವಲಯ ಮೇಲ್ವಿಚಾರಕಿ ಪದ್ಮಾವತಿ ಬಿರಾದಾರ, ಪ್ರಮುಖರಾದ ಮೀನಾಕ್ಷಿ ಹಿರೇಮಠ ಭಾರತಿ, ತ್ರಿವೇಣಿ ಸೂರನ, ಶಿವಕಾಂತಮ್ಮ, ಶಿವಬಾಯಿ, ವಿಜಯಲಕ್ಷಿö್ಮÃ, ಪರ್ವೀನ್, ಭೀಮಾಬಾಯಿ, ಗೀತಾ, ಶರಣಮ್ಮ, ಸರಸ್ವತಿ, ಮಹಾದೇವಿ, ನಿಂಗಮ್ಮ, ಸಿದ್ದಮ್ಮ, ರತ್ನಮ್ಮ ಇತರರಿದ್ದರು. ಗುರು ಬಸಮ್ಮ ಸ್ವಾಗತಿಸಿದರು. ಶಾಕಾಂಬರಿ ನಿರೂಪಣೆ ಮಾಡಿದರು. ಭಾಗ್ಯಶ್ರೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net