ಗರ್ಭ ಧರಿಸಿದ ಹಸುವಿಗೆ ಬೇಡಿಕೆ ಅನ್ಯಾಯ

Eshwarappa PC 1
ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಮುಖಂಡರಾದ ವೀರಣ್ಣ ಹಳೇಗೌಡರ, ವಿರೇಶ ಊಂಡೊ0ಡಿ ಇದ್ದರು.
Published on

ಬಾಗಲಕೋಟೆ: ನಮ್ಮ ಸಂಸ್ಕೃತಿ, ಸಂಸ್ಕಾರ ಎಲ್ಲಿ ಹೋಗಿದೆ ಗೊತ್ತಾಗುತ್ತಲ್ಲ. ಒಂದು ಕಡೆ ೧೪೪ ವರ್ಷಗಳ ಬಳಿಕ ಹಿಂದುಗಳ ಪವಿತ್ರವಾದ ಕುಂಭಮೇಳ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗರ್ಭ ಧರಿಸಿದ ಹಸುವಿಗೆ ಬೇಡಿಕೆ ಬರುತ್ತಿರುವುದು ನೋವು ಉಂಟು ಮಾಡಿದೇ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಸ್ತಾನ, ಹಿಂದುಗಳಿಗೆ ಒಳ್ಳೆಯದಾಗಬೇಕು ಎಂದು ಸಾಧು ಸಂತರು ವಿಶೇಷವಾದ ಸಂವಿಧಾನ ತಯಾರು ಮಾಡಬೇಕು ಎನ್ನುವ ವಿಚಾರ ಮಾಡುತ್ತಿದ್ದಾರಂತೆ. ವಿಶೇಷವಾದ ಸಂವಿಧಾನದಲ್ಲಿ ಅದರಲ್ಲಿ ಹಿಂದುಗಳು, ಬೌದ್ಧರು, ಸಿಖ್ಖ್ರು ಇಂತವರು ಮಾತ್ರ ಸ್ಪರ್ಧೆ ಮಾಡಬೇಕು. ಕುಂಭಮೇಳದಲ್ಲಿ ಸಾಧು ಸಂತರು ತೀರ್ಮಾನ ಮಾಡುವ ಸಂದರ್ಭದಲ್ಲಿ. ಮತ್ತೊಂದು ಕಡೆ ಹಿಂದುಗಳ ಆರಾಧ್ಯ ದೇವ ಗೋವನ್ನು, ಗಬ್ಬಾದ ಹಸುಗಳನ್ನು ಕಡಿದು, ಮುಂಚಿತವಾಗಿ ಫೋಟೋ ತೆಗೆದು ಡಿಮ್ಯಾಂಡ್ ಕ್ರಿಯೇಟ್ ಮಾರಾಟ ಮಾಡುತ್ತಿರುವುದು ಅನ್ಯಾಯದ ಪರಮಾವಽ ಎಂದು ಟೀಕಿಸಿದರು.

ಸಚಿವ ಜಮೀರ್ ಅಹ್ಮದ್, ಸಿಎಂ, ಡಿಸಿಎಂ, ಗೃಹ ಮಂತ್ರಿಗಳು ಅಲ್ಲಿ ಹೋಗಿ ಏನು ನಡೆಯುತ್ತಿದೆ ಎಂದು ತಿಳಿಯಬೇಕು. ರಾಜ್ಯ ಸರ್ಕಾರ ಹಿಂದುಗಳಿಗೆ ಇಷ್ಟೊಂದು ಅನ್ಯಾಯ ಮಾಡಬಾರದು. ಇದರ ಪರಿಣಾಮ ಮುಂದೆ ಅನುಭವಿಸಬಹುದು. ಆದರೆ, ಇವತ್ತು ನೋಡಿ ನೋಡಿ ಸಂಕಟ ಆಗುತ್ತಿದೆ. ಇದಕ್ಕೆ ವಿರೋಧ ಮಾಡಿದ್ರೆ, ಕೂಗಾಡಿದ್ರೆ, ನೀವೆ ಕಾನೂನು ಕೈಗೆ ತೆಗೆದುಕೊಳ್ತಿರಿ ಅಂತೀರಿ. ಹಾಗಾದ್ರೆ ಪರವಾನಿಗೆ ತೆಗೆದುಕೊಂಡು ಗಬ್ಬದ ಹಸುಗಳನ್ನ ಕಟ್ ಮಾಡ್ತಿದ್ದಾರಾ? ಪರವಾನಿಗೆ ಪಡೆದು ಮಾರಾಟ ಮಾಡ್ತಿದ್ದಾರಾ? ರಾಜ್ಯ ಸರಕಾರ ಬರೀ ಮುಸಲ್ಮಾನರ ಸಂತೃಪ್ತಿ ಪಡಿಸುವ ವೋಟು ಪಡೆಯಲು ಮಾಡುತ್ತಿರುವುದನ್ನು ನೋಡಿ ನನಗಂತೂ ಬಹಳ ನೋವಾಗಿದೆ. ಅದಕ್ಕಾಗಿ ನಾನು ಸರ್ಕಾರಕ್ಕೆ ಗೋವಧೆ ನಿಲ್ಲಿಸುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದರು.

ಮುಖ0ಡರಾದ ವೀರಣ್ಣ ಹಳೇಗೌಡರ, ವಿರೇಶ ಊಂಡೊAಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net