ಗರ್ಭ ಧರಿಸದ ಗೋವಿನಿಂದ ಹಾಲು

IMG_20230924_113226
Published on

ಚಿಟಗುಪ್ಪ: ಗಬ್ಬ ಹೋಗಿಲ್ಲ(ಗರ್ಭಧರಿಸಿಲ್ಲ), ಮರಿ ಹಾಕಿಲ್ಲ ಆದರೂ ನಿತ್ಯ ಎರಡು ವೇಳೆ ಅರ್ಧ ಲೀಟರ್ ಹಾಲೂ ನೀಡುತ್ತಿದೆ ೧೬ ತಿಂಗಳ ಹಸು… ತಾಲೂಕಿನ ಬೇಮಳಖೇಡ ಗ್ರಾಮದಲ್ಲಿ ಈ ವಿಸ್ಮಯ ನಡೆದಿದೆ.

ಗ್ರಾಮದ ವೀರಭದ್ರಯ್ಯ ಮಠಪತಿ ಅವರ ೧೬ ತಿಂಗಳ ಹಸು ಗಬ್ಬಹೋಗಿಲ್ಲ (ಗರ್ಭಧರಿಸಿಲ್ಲ), ಮರಿ ಹಾಕಿಲ್ಲ ಆದರೂ ಹಾಲು ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.

ಅಮವಾಸ್ಯೆ ದಿನ ಬೆಳಗ್ಗೆ ಹಸುವಿನ ಹಾಲಿನ ಕೆಚ್ಚೆ ಉಬ್ಬಿರುವುದು ಗಮನಿಸಿದ ವೀರಭದ್ರಯ್ಯ ಅವರ ಮಗ ಹಸುವಿನ ಕೆಚ್ಚಲು ಹಿಂಡಿದಾಗ ಹಾಲು ಬರುತ್ತಿರುವುದನ್ನು ಕಂಡು ತಂದೆ-ತಾಯಿಗೆ ವಿಷಯ ತಿಳಿಸಿz್ದÁನೆ.
ಸಂಜೆ ಹಾಲು ಹಿಂಡಿದ್ದು, ಬಂದ ಹಾಲನ್ನು ಹುತ್ತಕ್ಕೆ ಹಾಗೂ ಹೂವಿನ ಗಿಡಗಳಿಗೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಭಾನುವಾರ ವಿಜಯವಾಣಿ ತಂಡ ಭೇಟಿ ನೀಡಿದಾಗ ಹಸುವಿನ ಕೆಚ್ಚಲು ಹಿಂಡಿ ತೋರಿಸಿದ್ದು, ಹಾಲು ಗಿಣ್ಣದ ಹಾಲಿನಂತ್ತಿದೆ. ಆದರೆ ಮನೆಗೆ ಬಳಸುತ್ತಿಲ್ಲ.
ಗೋಮಾತೆಯ ಈ ಅಚ್ಚರಿ ನೋಡಲು ಅಕ್ಕಪಕ್ಕದ ಜನ ತಂಡೋಪತAಡವಾಗಿ ಬರುತ್ತಿದ್ದು, ಭಕ್ತಿಯಿಂದ ಹಸುವಿಗೆ ನಮಿಸುತ್ತಿz್ದÁರೆ. ನಿತ್ಯ ಪೂಜೆಯೂ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net