ಗರುಡ ಪುರಾಣ ಚಿತ್ರ ಬಿಡುಗಡೆ ನ.೩ಕ್ಕೆ

IMG20231028113714
Published on

ಕಲಬುರಗಿ: ಪ್ರೀತಿ, ಸಸ್ಫೆನ್ಸ್, ಥ್ರಿಲರ್ ಕಥೆ ಆಧಾರಿತ `ಗರುಡ ಪುರಾಣ' ಸಿನೆಮಾ ನ.ಕ್ಕೆ ಬಿಡುಗಡೆ ಆಗಲಿದೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಶಿಕ್ಷೆ ಅನುಭವಿಸಲೇಬೇಕು ಎಂಬ ಸಂದೇಶವನ್ನು ಹೊತ್ತುಕೊಂಡ ಎಲ್ಲ ಅಂಶಗಳನ್ನು ಒಳಗೊಂಡ ಸಿನೆಮಾ ಇದಾಗಿದೆ ಎಂದು ನಾಯಕ ನಟ, ನಿರ್ದೇಶಕ ಮಂಜುನಾಥ ನಾಗಬಾ ಮಾಹಿತಿ ನೀಡಿದರು.

ಪ್ರೇಮಿಗಳು, ಸ್ನೇಹಿತರನ್ನು ಒಳಗೊಂಡ ಸಿನೆಮಾವೂ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯೊAದಿಗೆ ಥ್ರಿಲ್ ನೀಡಲಿದೆ. ಹೊಸಬರ ತಂಡವೇ ಈ ಸಿನೆಮಾ ಮಾಡಿದ್ದು, ನೂತನ ಪ್ರಯತ್ನಕ್ಕೆ ಥೇಟರ್‌ಗೆ ಹೋಗಿ ಪ್ರೋತ್ಸಾಹ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರಕ್ಕೆ ನಿರ್ಮಾಪಕರಾಗಿ ಸಿಂಧು ಕೆ.ಎಂ., ಸಹ ನಿರ್ಮಾಪಕ ಬಿ.ಎಲ್.ಯೋಗೇಶಕುಮಾರ ಬೆನ್ನೆಲುಬಾಗಿ ನಿಂತ್ತಿದ್ದಾರೆ. ಸುನೀಲ ನರಸಿಂಹಮೂರ್ತಿ ಕ್ಯಾಮೆರಾ ಕೈಚಳಕ ತೋರಿಸಿದ್ದು, ರಾಕೇಶ ಆಚಾರ್ಯ ಸಂಗೀತ ನಿರ್ದೇಶಕರಾಗಿದ್ದಾರೆ. ಪ್ರಥಮ ಹಂತದಲ್ಲಿ ರಾಜ್ಯದ ೩೫ ಥೇಟರ್‌ಗಳಲ್ಲಿ ವಿಶೇಷವಾಗಿ ಪಿವಿಆರ್ ನಲ್ಲಿ ಬಿಡುಗಡೆಗೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಾಯಕ ನಟಿ ದಿಶಾ ಶೆಟ್ಟಿ ಮಾತನಾಡಿ, ಇದು ನನ್ನ ಪ್ರಥಮ ಚಿತ್ರವಾಗಿದ್ದು, ಪ್ರೇಕ್ಷರಿಗೆ ಬೇಕಾದ ಎಲ್ಲ ಅಂಶಗಳನ್ನು ಸಿನೆಮಾ ಹೊಂದಿದೆ. ಹೊಸ ಪ್ರಯತ್ನಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಹ ನಿರ್ಮಾಪಕ ಬಿ.ಎಲ್.ಯೋಗೇಶಕುಮಾರ, ಅವಿನಾಶ, ಶಿವಾನಂದ ಹೊನಗುಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net