

ಬೀಳಗಿ: ಇನಾಂ ಹಂಚಿನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತ 56.27ಲಕ್ಷ ಷೇರು ಬಂಡವಾಳ ಹಾಗೂ 6.5 ಕೋಟಿ ರೂ. ದುಡಿಯುವ ಬಂಡವಾಳ ಹೊಂದುವ ಮೂಲಕ 14.44 ಲಕ್ಷ ರೂ. ನಿವ್ವಳ ಲಾಭ ಗಳಿಸಿರುವುದು ಸಾಮಾನ್ಯ ಕೆಲಸವಲ್ಲ ಎಂದು ವಿಧಾನ ಪರಿಷತ್ ಶಾಸಕ ಹಣಮಂತ ಆರ್. ನಿರಾಣಿ ಹೇಳಿದರು.
ಇನಾಂ ಹಂಚಿನಾಳದಲ್ಲಿ ಗುರುವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಹಾಗೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮೌಲ್ಯಾಧರಿತ ಶಿಕ್ಷಣ ಅಗತ್ಯವಾಗಿದೆ. ಇನಾಂ ಹಂಚಿನಾಳ ಪಿಕೆಪಿಎಸ್ ಅಧ್ಯಕ್ಷ ಸಿದ್ದುಗೌಡ ಕೋಮಾರ ದೇಸಾಯಿ ಅವರು ತಮ್ಮ ನಿಶ್ವಾರ್ಥ ಸೇವಾ ಮನೋಭಾವದಿಂದ ರೈತರ ಅನುಕೂಲಕ್ಕೆ ತಮ್ಮ ಸ್ವಂತ 10 ಲಕ್ಷ ರೂಗಳನ್ನು ಸಂಘದಲ್ಲಿಟ್ಟು ರೈತರಿಗೆ ಸಾಲ ಪಡೆದುಕೊಳ್ಳಲು ಒಂದು ಮಾದರಿಯ ಸೇವೆ ಮಾಡುತ್ತಿರುವುದು ಮೆಚ್ಚವಂತದ್ದಾಗಿದೆ ಎಂದರು.
ಸಂಸ್ಥೆ ಬೆಳವಣಿಗೆಗೆ ಇಲ್ಲಿ ಕಾರ್ಯನಿರ್ವಹಿಸುವ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಪ್ರಾಮಾಣಿಕ ನಿಷ್ಠೆಯಿಂದ ಪ್ರತಿ ವರ್ಷವೂ ಸಂಘವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಯಲ್ಲಿ 1500 ಕೋಟಿ ರೂಗಳ ಸಾಲ ವಿತರಿಸಲಾಗಿದೆ ಎಂದರು.
ಬಾಗಲಕೋಟೆ ನಗರಸಭೆ ಅಧ್ಯಕ್ಷೆ ಸವಿತಾ ಅನ್ನಪ್ಪ ಲೆಂಕನ್ನವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಮಾಜಿಕ ಸೇವೆ ಹಾಗೂ ರಾಜಕೀಯ ಸೇವೆ ಮಾಡಲು ಗುರು ಇದ್ದರೆ ಮಾತ್ರ ಮಾಡಲು ಸಾಧ್ಯ ಎಂದರಲ್ಲದೆ, ಇನಾಂ ಹಂಚಿನಾಳ ಪಿಕೆಪಿಎಸ್ ಸಂಘವು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಿದ್ದುಗೌಡ ಕೋಮಾರ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ, ಸಂಸ್ಥೆಗಳು ಬೆಳವಣಿಗೆಗೆ ರೈತರು ಹಾಗೂ ಜನಸಾಮಾನ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಕೆಎಂಎ್ ಅಧ್ಯಕ್ಷ ಸಿದ್ದಪ್ಪ ಕಡಪಟ್ಟಿ ಮಾತನಾಡಿದರು.
ಸಂಘಧ ಉಪಾಧ್ಯಕ್ಷ ಹಣಮಂತಗೌಡ ಪಾಟೀಲ, ಗ್ರಾಮದ ಹಿರಿಯರಾದ ಅನ್ನಪ್ಪ ಲೆಂಕೆನ್ನವರ, ಈರಪ್ಪ ಕೋಟಿ, ಅನ್ನಪ್ಪ ಲೆಂಕೆನ್ನವರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಯರಗಟ್ಟಿ, ನಿರ್ದೇಶಕರಾದ ಹಣಮಂತ ಕೊಪ್ಪದ, ಹಣಮಂತ ಕೊಲ್ಲಾರ, ರುದ್ರಪ್ಪ ತಂಬಾಕದ, ಮಲ್ಲಪ್ಪ ಗಾಣಿಗೇರ, ರಮೇಶ ಹಳ್ಳಿ, ಬಸವರಾಜ ತೇಲಸಂಗ, ಕಸ್ತೂರಿ ಮೇಡ್ಲಿ, ಲಲಿತಾ ತಂಬಾಕದ, ಸಿದ್ದಪ್ಪ ವಾಲಿಕಾರ, ಬ್ಯಾಂಕಿನ ಪ್ರತಿನಿಧಿ ಆರ್.ಎಲ್. ಕೊಳ್ಳನ್ನವರ ಇತರರಿದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.