

ಕಲಬುರಗಿ: ಯೋಗರಾಜ ಭಟ್ ನಿರ್ದೇಶನದಲ್ಲಿ ಪರ್ವ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಗರಡಿ ಚಲನಚಿತ್ರ ನ.೧೦ರಂದು ಬಿಡುಗಡೆಯಾಗಲಿದೆ ಎಂದು ಮಾಜಿ ಸಚಿವರೂ ಆದ ಚಿತ್ರ ನಿರ್ಮಾಪಕ, ಹಿರಿಯ ನಟ ಬಿ.ಸಿ.ಪಾಟೀಲ್ ಹೇಳಿದರು.
ಎಸ್.ಎಸ್. ಸೂರ್ಯ ನಾಯಕ ನಟನಾಗಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ನೀಡಿದ್ದಾರೆ. ರಾಣೆಬೆನ್ನೂರಿನಲ್ಲಿ ನ.೧ರಂದು ಖ್ಯಾತ ನಟ ದರ್ಶನ್ ತೂಗುದೀಪ ಟ್ರೇಲರ್ ಬಿಡುಗಡೆ ಮಾಡಿದ್ದು, ಮೂರೇ ದಿನಗಳಲ್ಲಿ ಸುಮಾರು ೧೧ ಲಕ್ಷ ಅಭಿಮಾನಿಗಳು ವೀಕ್ಷಿಸಿದ್ದಾರೆ. ಚಿತ್ರದಲ್ಲಿರುವ ಐದರ ಪೈಕಿ ಮೂರು ಹಾಡುಗಳನ್ನು ಈಗಾಗಲೇ ರಿಲೀಸ್ ಮಾಡಿದ್ದು, ಯೋಗರಾಜ ಭಟ್ ರಚಿಸಿರುವ ಹೊಡಿಲೆ ಹಲಗಿ ಗೀತೆಯನ್ನು ಸುಮಾರು ೩೫ ಲಕ್ಷ್ಮೀ ಮಂದಿ ಆಲಿಸಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊAಡರು.
ಉತ್ತರ ಕರ್ನಾಟಕದ ಕುಸ್ತಿ ಕಲೆಯ ಸುತ್ತ ಚಿತ್ರಕಥೆ ಹೆಣೆದಿದ್ದು, ಇಡೀ ರಾಜ್ಯದ ಬೇರೆ ಬೇರೆ ಭಾಗಗಳ ಪೈಲ್ವಾನರು ಪ್ರಮುಖ ಪಾತ್ರ ವರ್ಗದಲ್ಲಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾರ್ಯದರ್ಶಿ ಯಶವಂತರಾಯ ಅಷ್ಟಗಿ ಹಾಗೂ ಗುರುಬಸಪ್ಪ ಸಜ್ಜನಶೆಟ್ಟಿ ಇದ್ದರು.