

ಚಿಕ್ಕಮಗಳೂರು: ಕಾಂಗ್ರೆಸ್ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಅಭಿವೃದ್ಧಿಗೊಳಿಸಿದರಂತೆ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಬಡ ಜನರಿಗೆ ಶಕ್ತಿ ನೀಡುವ ಕೆಲಸ ಮಾಡಲಾಗಿದೆ. ಇದರಿಂದ ರಾಜ್ಯದ ಜನ ಸಂಭ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರ ಅವರು, ಆರ್ಥಿಕ ಸಂಕಷ್ಟದಿAದ ತತ್ತರಿಸಿ ಹೋಗಿದ್ದ ಜನರಿಗೆ ಗ್ಯಾರಂಟಿಗಳ ಮೂಲಕ ಅವರ ಜೀವನ ರೂಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇಲ್ಲದ ಸಂದರ್ಭದಲ್ಲಿ ೫ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಯಿತು. ಅಧಿಕಾರಕ್ಕೆ ಬಂದ ೮ ತಿಂಗಳಲ್ಲಿ ಆ ೫ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವ ಮೂಲಕ ಬಡ ಜನರಿಗೆ ಅನುಕೂಲ ಒದಗಿಸಲಾಗಿದೆ. ಜೊತೆಗೆ ಸವಲತ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನೋಟು ಬದಲಾವಣೆ ಮಾಡಿದ ಪರಿಣಾಮ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅದರ ಉz್ದೆÃಶ ಈಡೇರಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರು ಕಷ್ಟಗಳನ್ನು ಎದುರಿಸಬೇಕಾಯಿತು. ವಿಮಾನ ನಿಲ್ದಾಣದಲ್ಲೇ ಕಟ್ಟೆಚ್ಚರ ವಹಿಸಿದ್ದರೆ ಕೊರೋನಾ ಸೋಂಕು ಹರಡುತ್ತಿರಲಿಲ್ಲ. ಜಿಎಸ್‌ಟಿಯಿಂದ ಜನರಿಗೆ ಹೊರೆಯಾಗಿದೆ. ಸ್ವಾತಂತ್ರÈಭಾರತದ ಆರಂಭದಲ್ಲಿ ಆರ್ಥಿಕ ಪರಿಸ್ಥಿತಿ ಕಷ್ಟವಾಗಿತ್ತು. ಆದರೂ ನೆಹರು ದೇಶವನ್ನು ಮುಂದೆ ತೆಗೆದುಕೊಂಡು ಹೋದರು. ದೇಶಕ್ಕೆ ಒಳ್ಳೆಯ ಆರ್ಥಿಕ ತಳಪಾಯ ಹಾಕಿಕೊಟ್ಟರು ಎಂದು ಬಣ್ಣಿಸಿದರು.
ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ದೇಶದ ಗೋದಾಮಿನಲ್ಲಿ ಆಹಾರ ಶೇಖರಿಸಲು ಸಾಧ್ಯವಾಯಿತು. ದೇಶಕ್ಕೆ ಉದಾರ ನೀತಿಯನ್ನು ತರಲಾಯಿತು. ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ರಾಜಕೀಯ ಸ್ವಾತಂತ್ರÈದ ಜೊತೆಗೆ ಆರ್ಥಿಕ ಮತ್ತು ಸಮಾಜಿಕ ಸ್ವಾತಂತ್ರÈ ದೊರೆಯಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಅದನ್ನು ನಾವು ಈಡೇರಿಸಬೇಕು ಎಂದರು.
ಇAದಿರಾಗಾAಧಿ ಬ್ಯಾಂಕುಗಳನ್ನು ರಾಷ್ಟಿçÃಕರಣ ಮಾಡಿದ್ದರ ಫಲವಾಗಿ ಬಡಜನರು ಬ್ಯಾಂಕಿನಲ್ಲಿ ಖಾತೆ ತೆರೆಯಲು ಸಾಧ್ಯವಾಯಿತು. ೨೦ ಅಂಶಗಳ ಕಾರ್ಯಕ್ರಮ ರೂಪಿಸಿ, ಪ್ರತಿಯೊಬ್ಬರಿಗೂ ಶಕ್ತಿ ತುಂಬುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
ರಾಜ್ಯದ ಯುವಜನರಿಗೆ ಉದ್ಯೋಗ ಕೊಡಬೇಕಾಗಿದೆ. ನಿರುದ್ಯೋಗಿ ಯುವಜನರಿಗೆ ಎರಡು ವರ್ಷ ಉಚಿತವಾಗಿ ಹಣನೀಡುವ ಯುವನಿಧಿಯನ್ನು ಜಾರಿಗೊಳಿಸಲಾಗಿದೆ. ಕೆಲವರು ಬಿಟ್ಟಿ ಭಾಗ್ಯಗಳೆಂದು ಟೀಕಿಸುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಸರ್ಕಾರ ಪಡೆದು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸಮಾಡಲಾಗುತ್ತಿದೆ. ಇದರಿಂದ ಜನರಲ್ಲಿ ಕೊಳ್ಳುವ ಶಕ್ತಿ ಬಂದಿದೆ. ಉದ್ಯೋಗ ದೊರೆಯುತ್ತಿದೆ. ಆದರೆ ಸುಳ್ಳು ಹೇಳುವುದು ಕೆಲವರಿಗೆ ಅಭ್ಯಾಸವಾಗಿಹೋಗಿದೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯುವ ಜನರು ನಮ್ಮ ಆಸ್ತಿ. ಅವರು ಸುಖ, ಸಂತೋಷದಿAದ ಇರಬೇಕೆಂದು ಸರ್ಕಾರ ಬಯಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ತಮ್ಮ ಹಂತದಲ್ಲೇ ಜನರ ಸಮಸ್ಯೆ ಆಲಿಸಿದರೆ ಅವರು ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ ಈ ನಿಟ್ಟಿನಲ್ಲಿ ಮಾನವೀಯತೆಯಿಂದ ಕೆಲಸ ನಿರ್ವಹಿಸುತ್ತೇವೆಂಬ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಗೃಹಲಕ್ಷಿö್ಮÃ ಯೋಜನೆಯಡಿ ತಾಲೂಕಿನಲ್ಲಿ ೬೭,೭೨೮ ಜನರು ಹೆಸರು ನೋಂದಾಯಿಸಿದ್ದಾರೆ. ೬೪,೮೪೭ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಉಳಿದ ೩ಸಾವಿರ ಜನರಿಗೆ ಸರಿಯಾದ ದಾಖಲೆಗಳನ್ನು ನೀಡದ ಪರಿಣಾಮ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ದಾಖಲೆ ಸರಿಪಡಿಸಿ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ಹೊಸ ಯೋಜನೆ, ಯೋಚನೆ ಮಾಡುತ್ತಿದೆ. ಜನರಿಗೆ ಸಮಾಜಿಕ, ಆರ್ಥಿಕ ಭದ್ರತೆ ಒದಗಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಫಲಾನುವಿಗಳಾದ ಅಂತೋಣಿ, ಪ್ರೀತಿ, ಜಮೀಲಾ, ತರೀಕೆರೆಯ ಲಕ್ಷಿö್ಮÃ, ದೇವರಳ್ಳಿಯ ರೂಪ ಮತ್ತಿತರರು ಗ್ಯಾರಂಟಿಗಳ ಪ್ರಯೋಜನದ ಬಗ್ಗೆ ತಮ್ಮ ಅನುಭವ ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಪಂ. ಸಿಇಒ ಡಾ. ಬಿ.ಗೋಪಾಲಕೃಷ್ಣ, ಎಡಿಸಿ ನಾರಾಯಣರಡ್ಡಿ ಕನಕ ರಡ್ಡಿ, ಎಸ್‌ಪಿ ಡಾ. ವಿಕ್ರಮ್‌ಅಮಟೆ, ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್, ತಹಸೀಲ್ದಾರ್ ಸುಮಂತ್, ತಾಪಂ ಇಒ ತಾರನಾಥ್, ನಗರಸಭೆ ಆಯುಕ್ತ ಬಸವರಾಜ್ ಮತ್ತಿತರರಿದ್ದರು.