ಗ್ಯಾರಂಟಿ ಯೋಜನೆಗಳೇ ಸಂಯುಕ್ತ ಗೆಲುವಿಗೆ ಶ್ರೀರಕ್ಷೆ

jkd election prachar
ಜಮಖಂಡಿ ನಗರದ ನೂರಾನಿ ಕಾಲನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಅವರ ತಾಯಿ ಭಾಗ್ಯಶ್ರಿ ಶಿವಾನಂದ ಪಾಟೀಲ ಸೇರಿ ಮುಖಂಡರು ಮತಯಾಚಿಸಿದರು. ಭಾಗ್ಯಶ್ರೀ ಶಿವಾನಂದ ಪಾಟೀಲ, ಮುಖಂಡರಾದ ನಜೀರ್ ಕಂಗನೊಳ್ಳಿ, ಬಿ.ಎಸ್. ಸಿಂಧೂರ, ವರ್ಧಮಾನ ನ್ಯಾಮಗೌಡ ಇತರರಿದ್ದರು.
Published on

ಜಮಖಂಡಿ: ಬಾಗಲಕೋಟೆ ಲೋಕಸಭೆ ಕ್ಷೇತ್ರಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಭಾರಿ ಸ್ವಾಗತ ಸಿಗುತ್ತಿದೆ ಎಂದು ಭಾಗ್ಯಶ್ರೀ ಶಿವಾನಂದ ಪಾಟೀಲ ಹೇಳಿದರು.

ನಗರದ ವಿವಿಧ ಕಾಲನಿಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಪುತ್ರಿ ಸಂಯುಕ್ತ ಪಾಟೀಲ ಪರ ಮತಯಾಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕ್ಷೇತ್ರಾದ್ಯಂತ ಕಾಂಗ್ರೆಸ್ ಅಲೆ ಇದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಂಯುಕ್ತ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದರು.

ಕ್ಷೇತ್ರದ ಅಭಿವೃದ್ಧಿಗೆ, ಮಹಿಳೆಯರ ಸಮಸ್ಯೆಗಳಿಗೆ ಸಂಯುಕ್ತ ಪಾಟೀಲ ಧ್ವನಿಯಾಗಲಿದ್ದಾರೆ ಎಂದರು.

ಮುಖಂಡರಾದ ನಜೀರ್ ಕಂಗನೊಳ್ಳಿ, ಬಿ.ಎಸ್. ಸಿಂಧೂರ, ವರ್ಧಮಾನ ನ್ಯಾಮಗೌಡ, ಸಿದ್ದು ಮಿಶಿ, ಮಲ್ಲಮ್ಮ ತಾಳಂಪಲ್ಲೆ, ರೇಣುಕಾ ಬಗಿಸವಾಡ, ಆಶಾ ಬಿರಾದಾರ, ರವಿ ಯಡಹಳ್ಳಿ, ಲಿಂಗರಾಜ ಪಾಟೀಲ, ನಿಖೀಲ ಪಾಟೀಲ, ದಶರಥ ಒಗ್ಗೆನವರ, ಬಸವರಾಜ ಹರಕಂಗಿ, ರೋಹಿತ ಸೂರ್ಯವಂಶಿ, ಅಕ್ಬರ್ ಜಮಾದಾರ, ಸುನೀಲ ತೇಲಿ, ಮೀರಾ ಒಂಟಮೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net