

ತೇರದಾಳ: ಸ್ಥಳೀಯ ಎಸ್‌ಡಿಎಂ ದಾನಿಗೊಂಡ ಮಹಾವಿದ್ಯಾಲಯದಲ್ಲಿ ನಾಗರಪಂಚಮಿ ನಿಮಿತ್ತ ವಿದ್ಯಾರ್ಥಿಗಳು ಇಳಕಲ್ಲ ಸೀರೆ, ದೋತಿ, ಪಂಜೆ ಹಾಗೂ ಶರ್ಟ್ ತೊಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದರು.
ಸಂಸ್ಥೆ ಚೇರ್ಮನ್ ಡಾ. ಮಹಾವೀರ ದಾನಿಗೊಂಡ ಮಾತನಾಡಿ, ಭಾರತೀಯ ಹಬ್ಬಗಳು ಸಾಂಪ್ರದಾಯಿಕ ಉಡುಗೆ ತೊಡುಗೆ ಮತ್ತು ಆಹಾರಗಳ ಮೂಲಕ ವೈಜ್ಞಾನಿಕ ನೆಲೆಗಟ್ಟಿನ ಶ್ರೀಮಂತ ಬದುಕನ್ನು ಕಟ್ಟಿಕೊಡುತ್ತವೆ ಎಂದರು.
ಮಾನೇಜಿಂಗ್ ಟ್ರಸ್ಟಿ ಪ್ರತಿಭಾ ದಾನಿಗೊಂಡ, ಮಾನೇಜಿಂಗ್ ಡೈರೆಕ್ಟರ್ ಡಾ. ಪುಷ್ಪದಂತ ದಾನಿಗೊಂಡ, ಡಾ. ಮಧುರಾ ದಾನಿಗೊಂಡ, ಪ್ರಾಂಶುಪಾಲ ಸಂತೋಷ ಕೃಷ್ಣಾಪೂರ ಇತರರಿದ್ದರು.