ಗಮನ ಸೆಳೆಯುತ್ತಿದೆ ಛೋಟಾ ಭೀಮ್ ಗಣಪತಿ

31 KAMPLI 04
Published on

ಕಂಪ್ಲಿ: ತಾಲೂಕಿನ ಯಲ್ಲಮ್ಮ ಕ್ಯಾಂಪಿನಲ್ಲಿ ಬಜರಂಗಿ ಬಾಯ್ಸ ತಂಡದಿಂದ ಪ್ರತಿಷ್ಠಾಪಿಸಿರುವ ಛೋಟಾ ಭೀಮ್ ರೂಪದ ಬಾಲ ಗಣಪತಿ ಜನರನ್ನು ಸೆಳೆಯುತ್ತಿದೆ.

ಪಟ್ಟಣದ 11ನೇ ವಾರ್ಡ್ ವಾಸವಿ ಶಾಲೆ ಬಳಿ ಲಯನ್ಸ್ ಗ್ರೂಪ್‌ನಿಂದ ಗಣೇಶೋತ್ಸವ ನಿಮಿತ್ತ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, 20 ಯೂನಿಟ್‌ಗೂ ಹೆಚ್ಚು ರಕ್ತ ಸಂಗ್ರಹಿಸಲಾಯಿತು. ಪ್ರಮುಖರಾದ ವೀರಪ್ಪಾಚಾರ್, ಎಂ.ಕಾರ್ತಿಕ್, ರಮೇಶ್, ಬಸವರಾಜ ಇತರರಿದ್ದರು. ವಾರದ ಮಾರುಕಟ್ಟೆ ರಸ್ತೆಯಲ್ಲಿ ಶ್ರೀ ಸಿದ್ಧಿ ವಿನಾಯಕ ಉತ್ಸವ ಸಮಿತಿ, ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನ ಬಳಿ ಎವರ್‌ಗ್ರೀನ್ ಬಾಯ್ಸ, ಇಂದಿರಾನಗರದಲ್ಲಿ ಗಣಪತಿ ಪ್ರತಿಷ್ಠಾಪಕರು ಭಾನುವಾರ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net