ಗಮನ ಸೆಳೆದ ಶ್ರೀನಿವಾಸ ಕಲ್ಯಾಣ ನೃತ್ಯರೂಪಕ -ಪಿಎಸ್‌ಎಸ್‌ಆರ್ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

SAVE_20240112_215135.jpg
Published on

ದಾವಣಗೆರೆ: ತೋಳಹುಣಸೆಯ ಶಿವಗಂಗೋತ್ರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಬಾಪೂಜಿ ಎಸ್.ಪಿ.ಎಸ್.ಎಸ್ ಪಪೂ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಭಾರತೀಯ ಸಂಸ್ಕೃತಿ-ಪರಂಪರೆ ಬಿಂಬಿಸುವ ಅನೇಕ ನೃತ್ಯರೂಪಕಗಳು ನೋಡುಗರ ಕಣ್ತೆಳೆದವು. ವೈಕುಂಠ ಮಾದರಿಯಲ್ಲಿ ನಿರ್ಮಿತ ಭವ್ಯ ವೇದಿಕೆಯಲ್ಲಿ ಎಂಟನೇ ತರಗತಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದ ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ಪ್ರೇಕ್ಷಕರಿಗೆ ದಿವ್ಯ ಅನುಭೂತಿ ನೀಡಿತು.

ವಿವಿಧ ರಾಜ್ಯಗಳ ಜಾನಪದ ವೇಷಗಳಲ್ಲಿದ್ದ ಕಂಗೊಳಿಸಿದ ವಿದ್ಯಾರ್ಥಿಗಳು ಆಯಾ ರಾಜ್ಯದ ನೃತ್ಯಗಳನ್ನು ಪ್ರದರ್ಶಿಸಿದರು. ಭರತನಾಟ್ಯ ಕಲಾವಿದೆ ಭಾರ್ಗವಿ ನೃತ್ಯ ಸಂಯೋಜನೆ ಮಾಡಿದರೆ, ಸಹ-ಸಂಯೋಜಕರಾಗಿ ದಯಾನಂದ, ಹರೀಶ್ ಹಾಗೂ ವಿಜಯ್ ಕಾರ್ಯ ನಿರ್ವಹಿಸಿದರು.

ಮುಖ್ಯ ಅತಿಥಿ, ಸ್ಪಿಕ್ ಮ್ಯಾಕೆ ಸಂಸ್ಥೆಯ ಬೆಂಗಳೂರು ವಿಭಾಗದ ಮುಖ್ಯಸ್ಥೆ ಸುಪ್ರೀತಿ ಆನ್‌ಲೈನ್ ಮೂಲಕ ಮಾತನಾಡಿ, ಮಕ್ಕಳ ಪ್ರತಿಭಾ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡುವಂತೆ ಅನಾವರಣವಾಗಬೇಕು. ಅವರ ಸ್ಮತಿ ಪಟಲದಲ್ಲಿ ಸದಾ ಉಳಿಯುವಂತೆ ಇರಬೇಕು ಎಂದು ಹೇಳಿದರು.

ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು, ದಾವಣಗೆರೆ ಬಾಪೂಜಿ ಪ್ರೌಢಶಾಲೆ ಹಿರಿಯ ಪ್ರಾಚಾರ್ಯೆ ಜಿ.ಎಸ್.ವನಿತಾ,

ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆ ಪ್ರಾಚಾರ್ಯ ಬಿ.ಎನ್. ಕಮಲ್, ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಶಾಲೆಯ ಉಪಪ್ರಾಚಾರ್ಯ ಎಚ್.ಜಿ.ಉಮಾಪತಿ, ರಮೇಶ್ ಬಾಬು ಇದ್ದರು.

ಪಠ್ಯ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ 9ನೇ ತರಗತಿ ವಿದ್ಯಾರ್ಥಿನಿ ಪಿ. ಮೌಲ್ಯಾ ಶೈಕ್ಷಣಿಕ ವರ್ಷದ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಪಡೆದಳು. ಅರುಣ್ ಪ್ರಸಾದ್ ಸ್ವಾಗತಿಸಿದರು. ರಾಜೇಶ್ ಪ್ರಸಾದ್ ಅವರು ವಂದಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net