ಗಮನ ಸೆಳೆದ ವಿಜ್ಞಾನ ದಿನಾಚರಣೆ

4
Published on

ಮೈಸೂರು: ನಗರದ ಲಲಿತ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಗಮನ ಸೆಳೆಯಿತು.

ಅನುದಾನರಹಿತ ಶಾಲೆಯನ್ನು ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಮಿತಿಯ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ನರ್ಸರಿಯಿಂದ 10ನೇ ತರಗತಿವರೆಗೂ 5 ಡಜನ್‌ನಷ್ಟು ವೈಜ್ಞಾನಿಕ ಪ್ರಾಜೆಕ್ಟ್‌ಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.

ಅದರಲ್ಲೂ ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಪರಿಸರ ನಾಶದಿಂದ ಆಗುವ ವಿನಾಶಗಳು, ಜಾಗತಿಕ ತಾಪಮಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ವಿವಿಧ ಮಾದರಿಯ ಮೂಲಕ ಅರಿವು ಮೂಡಿಸಿದರು. ಜತೆಗೆ, ವಿದ್ಯಾರ್ಥಿಗಳು ತಮ್ಮ ವೈಜ್ಞ್ಞಾನಿಕತೆ, ವೈಚಾರಿಕತೆ ಮೆರೆದರು. ಇತಿಹಾಸದ ನಾಲ್ಕೈದು ಶತಮಾನಗಳಲ್ಲಿ ಮಾನವ ಹೇಗೆ ಅಭಿವೃದ್ಧಿ ಹೊಂದಿರುತ್ತಾನೆ ಎಂಬುದನ್ನು ವೈಜ್ಞ್ಞಾನಿಕ ಯೋಜನಾ ಮಾದರಿಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ವಿದ್ಯಾರ್ಥಿಗಳ ವಿವಿಧ ವೈಜ್ಞಾನಿಕ ಪ್ರಾಜೆಕ್ಟ್‌ಗಳನ್ನು ನೋಡಿ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಲ್ಲಿ ಹೊಸ ಅನ್ವೇಷಣೆಗಳನ್ನು ಮಾಡುವ ಹುಮ್ಮಸ್ಸು ಬೆಳೆಯಬೇಕು ಎಂದರು.

ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಮೈಸೂರು ವಿಭಾಗದ ಅಧ್ಯಕ್ಷೆ ಪೂಜಾ ಅಗರ್ವಾಲ್ ಮಾತನಾಡಿ, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಯಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಪ್ರತಿಯೊಬ್ಬ ಶಿಕ್ಷಕರು ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರೈಲ್ವೆಯ ಹಿರಿಯ ಅಧಿಕಾರಿಗಳಾದ ವಿನಾಯಕ್ ನಾಯಕ್, ಇ.ವಿಜಯ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net