ಗಮನ ಸೆಳೆದ ಬೃಹತ್ ತಿರಾಂಗ

indepndent speical
ಶೃಂಗೇರಿಯಲ್ಲಿ ಎಬಿಪಿವಿಯಿಂದ ಬೃಹತ್ ತಿರಾಂಗ ಮೆರವಣಿಗೆ ನಡೆಸಲಾಯಿತು.
Published on

ಶೃಂಗೇರಿ: ತಾಲೂಕಿನಾದ್ಯಂತ ಸ್ವಾತಂತ್ರೃದಿನವನ್ನು ನನ್ನ ಮಣ್ಣು-ನನ್ನ ದೇಶ ಘೋಷಣೆಯಡಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಕಾಲೇಜುಗಳು, ತಾಪಂ, ಸಂಘ-ಸಂಸ್ಥೆಗಳು, ಗ್ರಾಪಂ, ಪಪಂ, ವಿವಿಧ ಇಲಾಖೆಗಳು, ಬ್ಲಾಕ್ ಕಾಂಗ್ರೆಸ್ ಕಚೇರಿ, ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮೆಣಸೆ, ಧರೇಕೊಪ್ಪ, ಮರ್ಕಲ್ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ ಕೆರೆ ದಂಡೆ ಬಳಿ ಸಸಿಗಳನ್ನು ನೆಡಲಾಯಿತು. ಎಬಿಪಿವಿಯಿಂದ ವಿಭಿನ್ನವಾಗಿ ಆಚರಿಸಲಾಯಿತು. ಬೃಹತ್ ತಿರಾಂಗದ ಜತೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತ್ತ ಮುಖ್ಯಬೀದಿಯಲ್ಲಿ ಸಾಗಿ ಬಂದ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net