

ಗೋಣಿಕೊಪ್ಪ: ಕಾವೇರಿ ಚಂಗ್ರಾಂದಿ ಪತ್ತಾಲೋದಿ ಸಮಾರಂಭದಲ್ಲಿ ಬುಧವಾರ ಪೊನ್ನಂಪೇಟೆ ಕೊಡವ ಸಮಾಜ ತಂಡದ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ, ಟಿ.ಶೆಟ್ಟಿಗೇರಿ ಗೌರಿ-ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ, ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ 36 ಕಲಾವಿದರಲ್ಲಿ 14 ಕಿರಿಯರು ಭಾಗವಹಿಸಿದ್ದರು.
ಹೆಣ್ಣು ಮಕ್ಕ ಉಮ್ಮತ್ತಾಟ್, ಪಾಟ್, ಪಳಂಜೊಲ್‌ಲ್, ಕವನ, ಏಳು ರೀತಿಯ ನೃತ್ಯ, ಗಂಡು ಮಕ್ಕಳು ಕೋಲಾಟ್, ಪರೆಕಳಿ, ಕಪ್ಪೆಯಟ್, ವಾಲಗತ್ತಾಟ್ ನಡೆಸಿಕೊಟ್ಟರು. ಕಿರಿಯ ವಯಸ್ಸಿನ ಮುಕ್ಕಾಟೀರ ಹಿತೈಷಿ ನಾಣಯ್ಯ, ಚೆಟ್ಟಂಗಡ ಲೇಖನ ಶಮಿ ಪುಟ್ಟ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಉಳುವಂಗಡ ಮೋಹಿತ್ ಅಯ್ಯಪ್ಪ ಜಬ್ಬೂಮಿ ಹಾಡು, ಚಂಗುಲಂಡ ಪಲ್ಲವಿ, ಆಲೆಮಾಡ ರೀತಿ, ಚೀರಂಡ ಸಾಕ್ಷಿ, ನೆಲ್ಲೀರ ವಂಸಿ, ಅಂಜನಾ ಸ್ವಾಗತ ನಿಂಗಕ್ ಹಡಿಗೆ ಹೆಜ್ಜೆ ಹಾಕಿದರು. ಚೆಟ್ಟಂಗಡ ಲೇಖನಿ ಶಮಿ ಪಚ್ಚೆ ರಂಗ್ ಹಾಡು, ಮುಕ್ಕಾಟೀರ ಹಿತೈಷಿ ನಾಣಯ್ಯ ಬಾ ತಾಯಿ ಕಾವೇರಿ ಹಾಡು ಹಾಡಿದರು. ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ಕವನ ವಾಚಿಸಿದರು. ಚೆಟ್ಟಂಗಡ ರಮಾ ಶಮಿ ಪಳಂಜೊಲ್‌ಲ್ ಪ್ರಸ್ತುತ ಪಡಿಸಿದರು. ಕಳ್ಳಿಚಂಡ ದೇಚಕ್ಕ, ಕಳ್ಳಿಚಂಡ ಪೂವಕ್ಕ, ಕಾಯಪಂಡ ಹೃತಿ ಸಾಬು ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದರು. ಬಿದ್ದಂಡ ಡಿಂಚಲ್, ಬಯವಂಡ ತೀಕ್ಷ್ಣ, ಮುದ್ದಿಯಡ ಭೂಮಿಕ ನೃತ್ಯ ಮಾಡಿದರು.
ಪತ್ತಾಲೋದಿ, ಕಾವೇರಿ ಚಂಗ್ರಾಂದಿ ಆಚರಣೆ ಬಗ್ಗೆ ಉಳುವಂಗಡ ಕಾವೇರಿ ಉದಯ ಮಾಹಿತಿ ನೀಡಿದರು. ಕೊಡವಾಮೆ ಮತ್ತು ಕಾವೇರಿ ತೀರ್ಥದ ವಿಚಾರವನ್ನು ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ತಿಳಿಸಿದರು. ತಂಡಕ್ಕೆ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾರ್ಗದರ್ಶನ ನೀಡಿದರು.