ಗಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ

3 bk-1
 ದೀಪಾವಳಿ ಪಾಡವಾ ಹಬ್ಬದ ನಿಮಿತ್ತ ಬಸವಕಲ್ಯಾಣದಲ್ಲಿ ಶನಿವಾರ ಸಂಜೆ ಗೌಳಿ ಸಮಾಜದಿಂದ ಎಮ್ಮೆಗಳ ಓಟದ ಸ್ಪರ್ಧೆಯಲ್ಲಿ ಪ್ರಮುಖರು ಭಾಗವಹಿಸಿ ಗಮನ ಸೆಳೆದರು.
Published on

ಬಸವಕಲ್ಯಾಣ: ದೀಪವಳಿ ಪಾಡವಾ ಹಬ್ಬದ ನಿಮಿತ್ತ ನಗರದಲ್ಲಿ ಶನಿವಾರ ಸಂಜೆ ಗೌಳಿ ಸಮಾಜದಿಂದ ಆಯೋಜಿಸಿದ್ದ ಎಮ್ಮೆಗಳ ಓಟದ ಸ್ಪರ್ಧೆ ವಿಶೇಷವಾಗಿ ಗಮನ ಸೆಳೆಯಿತು. ನಗರ ಪ್ರದೇಶ ಸೇರಿ ವಿವಿಧೆಡೆಯಿಂದ ಆಗಮಿಸಿದ ಜನರು ಸ್ಪರ್ಧೆ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯರಸ್ತೆಯ ಮಾರ್ಗವಾಗಿ ಗಾಂಧಿ ವೃತ್ತದ ಮೂಲಕ ಖಾನಾಪುರ ರಸ್ತೆಯ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಈ ಮೆರವಣಿಗೆ ನಡೆಯಿತು. ಕೆಲಕಾಲ ಗಾಂಧಿ ವೃತ್ತದಲ್ಲಿಯೂ ಕೂಡ ಸ್ಪರ್ಧೆ ನಡೆಯಿತು.

ಎಮ್ಮೆಗಳಿಗೆ ವಿಶೇಷ ಸ್ನಾನ ಮಾಡಿಸಿ ಶೃಂಗರಿಸಲಾಗಿತ್ತು. ಖಾನಾಪುರ ರಸ್ತೆಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಎಮ್ಮೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಎಮ್ಮೆಗಳ ಮಾಲೀಕರು ಎಮ್ಮೆಗಳನ್ನು ಓಡಿಸುವ ಮೂಲಕ ಮನರಂಜಿಸಿದರು. ಅಲ್ಲದೆ ದ್ವಿಚಕ್ರದ ವಾಹನದಲ್ಲಿ ಕುಳಿತ ಮಾಲೀಕರು ಎಮ್ಮೆಗಳಿಗೆ ಬಟ್ಟೆ ತೋರಿಸಿ ಮುಂದೆ ಸಾಗುತ್ತ ಹುರಿದುಂಬಿಸುತ್ತಿರುವದು ಕಂಡು ಬಂತು.

ಗೌಳಿ ಸಮಾಜದ ತಾಲೂಕು ಅಧ್ಯಕ್ಷ ಮಹಾದೇವ ಲಾತೂರಕರ, ಸಮಾಜದ ಮುಖಂಡರಾದ ನರಸಿಂಗ ದೈಹಂಡೆ, ಅಶೋಕ ರಾಮಸರ್ಜೆ, ದತ್ತು ಖೇಲಗೌಳಿ, ರಾಜು ನಿಸ್ತಾನೆ, ಸುರೇಶ ಲಾತೂರಕರ, ರಾಮ ಲಾತೂರಕರ, ಕಮಲಾಕರ ಲಾತೂರಕರ, ಪ್ರಕಾಶ ಲಾತೂರಕರ ಇತರರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಗೌಳಿ ಸಮಾಜದ ಪ್ರಮುಖರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net