ಗಮನ ಸೆಳೆದ ಎತ್ತುಗಳ ಚಕ್ಕಡಿ ಓಟ

22BK2 A
 ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಹೋಳಾ ಹಬ್ಬದ ನಿಮಿತ್ತ ನಡೆದ ಎತ್ತುಗಳ ಚಕ್ಕಡಿ ಓಟದ ಸ್ಪರ್ಧೆ ಗಮನ ಸೆಳೆಯಿತು.
Published on

ಬಸವಕಲ್ಯಾಣ: ಹೋಳಾ ಹಬ್ಬದ ನಿಮಿತ್ತ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಎತ್ತುಗಳ ಚಕ್ಕಡಿ ಓಟದ ಸ್ಪರ್ಧೆ ಗಮನ ಸೆಳೆಯಿತು. ಎತ್ತುಗಳಿಗೆ ಕೊರಳಲ್ಲಿ ಗೆಜ್ಜೆ ಪಟ್ಟಿ, ಕಾಲುಗಳಿಗೆ ಗೆಜ್ಜೆ ಕಟ್ಟಿ ಅಲಂಕರಿಸಿ, ಓಟಕ್ಕಾಗಿಯೇ ಸಿದ್ಧಪಡಿಸಿದ ಚಕ್ಕಡಿ(ಸಣ್ಣ ಗಾಲಿ ಬಂಡಿ)ಗೆ ಕಟ್ಟಿ ಓಡಿಸುವ ದೃಶ್ಯ ಮೈನವಿರೇಳಿಸುವಂತಿತ್ತು.

ಬಜಾರ್‌ನಿಂದ ಆರಂಭವಾದ ಓಟದ ಸ್ಪರ್ಧೆಗೆ ಬಸವರಾಜ ಭೂಶೆಟ್ಟಿ ಮೂಲಕ ಚಾಲನೆ ನೀಡಿದ ನಂತರ ಗ್ರಾಮದ ಪ್ರಮುಖ ರಸ್ತೆ ಮೂಲಕ ಸಂಚರಿಸಿ ಲಕ್ಷ್ಮೀ ಮಂದಿರದವರೆಗೆ ನಡೆಯಿತು. ಚಕ್ಕಡಿ ಮೇಲೆ ನಿಂತ ಓಡಿಸುವ ರೈತರು ಎತ್ತಿನ ಬಾಲ ಹಿಡಿದು ಹುರಿದುಂಬಿಸುತ್ತಿದ್ದರೆ, ರಸ್ತೆ ಎರಡು ಬದಿ ಹಾಗೂ ಮನೆ ಮಾಳಿಗೆ ಮೇಲೆ ನಿಂತಿದ್ದ ಜನರು ಕೇಕೆ, ಸಿಳ್ಳೆ ಹಾಕಿ ಚಪ್ಪಾಳೆ ತಟ್ಟಿ ಎತ್ತುಗಳಿಗೆ ಪ್ರೋತ್ಸಾಹಿಸಿದರು.

ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ, ಬಿಜೆಪಿ ಮುಖಂಡ ಸಂತೋಷ ಪಾಟೀಲ್, ಗ್ರಾಪಂ ಸದಸ್ಯ ಸಂತೋಷ ಸಿಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ನಂದಾಬಾಯಿ ಪ್ರಭು, ಉಪಾಧ್ಯಕ್ಷೆ ಅನಿತಾ ಮಲ್ಲಿಕಾರ್ಜುನ ಮಾಲೆ, ಹೋಳಾ ಸಮಿತಿ ಅಧ್ಯಕ್ಷ ಸತೀಶ ಪಾಟೀಲ್, ಪ್ರಮುಖರಾದ ಕೇಶಪ್ಪ ಬಿರಾದಾರ, ಶಿವರಾಜ ಸಿಗಿ, ಧೂಳಪ್ಪ ಭೂಶೆಟ್ಟಿ, ಧೂಳಪ್ಪ ಪೊಸ್ತಾರ, ನಾಗಣ್ಣ ಘಾಂಗ್ರೆ, ಅಜಿಮೋದ್ದಿನ್, ಮಾಣಿಕ ಮಾಸ್ತರ, ಸತೀಶ ಪೊಸ್ತಾರ, ವೀರಣ್ಣ ಪಾಟೀಲ್, ಮಲ್ಲಿಕಾರ್ಜುನ ಸಿಗಿ, ದಿಲೀಪ ಮಾನೆ, ಸತೀಶ ಪಾಟೀಲ್, ಮಂಜುನಾಥ ಹೊಸಮನಿ ಇತರರಿದ್ದರು. ಮುಖಂಡ ದಯಾನಂದ ಕಟ್ಟಿಮನಿ ಸ್ವಾಗತಿಸಿ, ನಿರೂಪಣೆ ಮಾಡಿದರು.

ಬಹುಮಾನ: ಪ್ರಥಮ ಸ್ಥಾನ ಪಡೆದ ಎತ್ತಿನ ಚಕ್ಕಡಿ ಮಾಲೀಕ ಪಿಂಟು ಮಜಕುರಿ ಅವರಿಗೆ ೫೧ ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ಭೀಮಣ್ಣ ಪತ್ತಿ ಅವರಿಗೆ ೩೫ ಸಾವಿರ ರೂ. ಹಾಗೂ ತೃತೀಯ ಸ್ಥಾನ ಪಡೆದ ಶರಣಪ್ಪ ಲಕಶೆಟ್ಟಿ ಅವರಿಗೆ ೨೧ ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಒಟ್ಟು ೪೫ಕ್ಕೂ ಹೆಚ್ಚು ಎತ್ತಿನ ಚಕ್ಕಡಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮಾಜಿ ಶಾಸಕ ಡಾ. ದ್ದಲಿಂಗಪ್ಪ ಪಾಟೀಲ್ ೧.೧೧ ಲಕ್ಷ ರೂ., ಸಚಿವ ರಾಜಶೇಖರ್ ಪಾಟೀಲ್ ೧ ಲಕ್ಷ ರೂ. ಹಾಗೂ ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ೨೫ ಸಾವಿರ ರೂ. ದೇಣಿಗೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net