ಗಮನ ಸೆಳೆದ ಎತ್ತುಗಳ ಓಟ

Capture1
Published on

ಬಸವಕಲ್ಯಾಣ: ರಾಜೇಶ್ವರ ಗ್ರಾಮದಲ್ಲಿ ಹೋಳಾ ಹಬ್ಬದ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಎತ್ತುಗಳ ಚಕ್ಕಡಿ ಓಟದ ಸ್ಪಧರ್ೆ ಗಮನ ಸೆಳೆಯಿತು. ಸಣ್ಣ ಚಕ್ರದ ಚಕ್ಕಡಿಗೆ ಕಟ್ಟಿದ ವಿಶೇಷಾಲಂಕಾರಗಳಿಂದ ಶೃಂಗಾರಗೊಂಡ ಎತ್ತುಗಳು ನೆಗೆದು, ನೆಗೆದು ಓಡುವ ದೃಶ್ಯ ರೋಮಾಂಚನಕಾರಿಯಾಗಿತ್ತು.

ಕಾಲು-ಕೊರಳಲ್ಲಿ ಗೆಜ್ಜೆ-ಘಂಟೆ ಧರಿಸಿದ್ದ 40ಕ್ಕೂ ಹೆಚ್ಚು ಜೋಡಿ ಎತ್ತುಗಳು ಒಂದರ ಹಿಂದೆ ಇನ್ನೊಂದು ಓಡುತ್ತ ಬರುವಾಗ ಚಕ್ಕಡಿ ಮೇಲೆ ನಿಂತು ರೈತರು ಎತ್ತಿನ ಬಾಲ ಹಿಡಿದು ಮತ್ತಷ್ಟು ಜೋರಾಗಿ ಓಡುವಂತೆ ಅವುಗಳನ್ನು ಉತ್ತೇಜಿಸುವ ಮೂಲಕ ಓಟದ ಸ್ಪಧರ್ೆ ರಂಗೇರಿಸಿದರು.

ರಾಜೇಶ್ವರ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಜನರು ಓಟ ನಡೆದ ರಸ್ತೆಯುದ್ದಕ್ಕೂ ಎರಡು ಬದಿಯಲ್ಲಿ ನಿಂತು ಎತ್ತಿನ ಬಂಡಿಯ ಓಟವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಮನೆ-ಅಂಗಡಿಗಳ ಮುಂದೆ, ಮಾಳಿಗೆಗಳ ಮೇಲೆಯೂ ಅಪಾರ ಸಂಖ್ಯೆಯಲ್ಲಿ ನಿಂತು ನೋಡುತ್ತಿದ್ದರು. ಹೀಗಾಗಿ ಸ್ಪಧರ್ೆ ನಡೆದ ರಸ್ತೆ ಬದಿಯಲ್ಲಿ ಜನ ಜಾತ್ರೆಯಂತೆ ಕಂಡು ಬಂತು.

ಮಲ್ಲಣ್ಣ ಭೂಶೆಟ್ಟಿ ಅವರು ಕರಿ ಕಡೆದು ಓಟಕ್ಕೆ ಚಾಲನೆ ನೀಡಿದರು. ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ರಾಜೇಶ್ವರದಲ್ಲಿ ಪ್ರತಿ ವರ್ಷ ಕೃಷಿಕರ ವಿಶಿಷ್ಟವಾದ ಹೋಳಾ ಹಬ್ಬವನ್ನು ಜಾತ್ರೆಯ ಮಾದರಿಯಲ್ಲಿ ಗ್ರಾಮದ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸುತ್ತಿದ್ದು, ಸೌಹಾರ್ದ ಸಂದೇಶ ಸಾರುವಂತಿದೆ. ಕೃಷಿಕರ ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬರಬೇಕಾಗಿದೆ ಎಂದರು.

ಎಂಎಲ್ಸಿ ಚಂದ್ರಶೇಖರ ಪಾಟೀಲ್, ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ಗ್ರಾಪಂ ಅಧ್ಯಕ್ಷ ಗುರುರಾಜ ಮೂಲಗೆ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಕೇಶಪ್ಪ ಬಿರಾದಾರ, ಧೂಳಪ್ಪ ಪೊಸ್ತಾರ, ಮಾಣಿಕಪ್ಪ ಕಟ್ಟಿಮನಿ, ನಾಗಣ್ಣ ಘಾಂಗ್ರೆ, ಸತೀಶ ಪೊಸ್ತಾರ, ಶಿವರಾಜ ಸೀಗಿ, ಸಿದ್ದು ಪುಣೆ, ಅಫ್ಸರ್ಮಿಯಾ, ಸತೀಶ ಪಾಟಿಲ್, ಡಾ.ಬಿ.ಪುರವಂತಗಿ, ರಾಚಯ್ಯ ಸ್ವಾಮಿ, ಮಲ್ಲಿಕಾಜರ್ುನ ಮಾಲೆ, ಮಿಲಿಂದ್ ಕುಲಕಣರ್ಿ, ಅಜಿಮೋದ್ದಿನ್, ಅಯೂಬ್ ಗುಲ್ಫರೋಸ್ ಇತರರಿದ್ದರು. ಸಂತೋಷ ಸೀಗಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಥಮ ಸ್ಥಾನಕ್ಕೆ 31 ಸಾವಿರ ರೂ.: ಸ್ಪಧರ್ೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಎತ್ತಿನ ಬಂಡಿ ಮಾಲೀಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಥಮ ಸ್ಥಾನ ಪಡೆದ ವೈಜಿನಾಥ ಸೀಗಿ ಅವರಿಗೆ ಶಾಸಕ ರಾಜಶೇಖರ ಪಾಟೀಲ್ ಅವರಿಂದ 31 ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ಪ್ರಕಾಶ ಸೀಗಿ(ಟೊಣ್ಣೆ) ಅವರಿಗೆ ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಅವರಿಂದ 21 ಸಾವಿರ ರೂ. ಹಾಗೂ ತೃತೀಯ ಸ್ಥಾನ ಪಡೆದ ಭೀಮಣ್ಣ ಪತ್ತಿ ಅವರಿಗೆ ಪಿಕೆಪಿಎಸ್ ಅಧ್ಯಕ್ಷ ರಾಚಯ್ಯ ಸ್ವಾಮಿ ಅವರಿಂದ 11 ಸಾವಿರ ರೂ. ಬಹುಮಾನ ನೀಡಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net