ಪಶ್ಚಿಮ ಬಂಗಾಲದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಓರ್ವ ಮಹಿಳೆಯಾಗಿ,ಹೋರಾಟಗಾರ್ತಿಯಾಗಿದ್ದಾರೆ. ಅವರ ಮೇಲೆ ಕೇಂದ್ರದಿಂದ ಸಾಕಷ್ಟು ರಿತಿಯಲ್ಲಿ ದಾಳಿ ನಡೆಸುತ್ತಿದ್ದರೂ ಎದುರಿಸಿ ಏಕಾಂಗಿಯಾಗಿ ಹೋರಾಟ ಮಾಡುತ್ತಿರುವ ದಿಟ್ಟ ಮಹಿಳೆ ಎಂದು ಶ್ಲಾಘಿಸಿದರು.
ಜೆಡಿಎಸ್ ಪಕ್ಷದಿಂದ ಹೊರಹೋಗುವವರಿಗೆ ಬಾಗಿಲುಗಳು ತೆರೆದೇ ಇದೆ ಹೋರ ಹೋಗುವವರು ಹೋಗಬಹುದು ಅವರಿಗೆ ಅಡ್ಡಿ ಯಾರು ಇಲ್ಲ ಎಂದು ನುಡಿದರು.
ರಾಜಕೀಯ ಹೊಂದಾಣಿಕೆಗೆ ನನ್ನ ಬಳಿಗೆ ಅಂದು ಬಂದದ್ದು ಕಾಂಗ್ರೇಸ್‍ನವರೇ ಅದು ಮುಗಿದ ಅಧ್ಯಯ ಕಾಂಗ್ರೇಸ್ ನವರು ಪದೇ ಪದೇ ಹಳೆ ವಿಚಾರವನ್ನೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮನೆ ಬಾಗಿಲಗೆ ಹೋಗುವ ಪರಿಸ್ಥಿತಿ ಬಂದರೆ ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ ಎಂದರು
ಸಿಡಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಿರುವುದು ನಾಮಕಾವಸ್ತೆಗಷ್ಟೇ. ಎಸ್‍ಐಟಿ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಪೋಟ ವಿಚಾರದಲ್ಲಿ ಮಹಾನಾಯಕನ ಕೈವಾಡ ಇದೆ ಎಂದು ಹೇಳಿದ್ದು ರಮೇಶ್ ಜಾರಕಿಹೊಳಿ. ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಗುರಿ ಮಾಡಿಕೊಂಡು ಹೊರಟಿದ್ದಾರೆಂದು ಶಿವಮೊಗ್ಗದಲ್ಲಿ ಅವರೇ ಹೇಳಿಕೆ ಹೇಳಿದ್ದಾರೆ. ಅದರ ಬಗ್ಗೆ ಯಾರ ಹೆಸರೂ ಹೇಳದೆ ಇರುವಾಗ ಈ ರಾಜ್ಯದಲ್ಲಿ ಹಲವಾರು ಮಹಾನ್‍ನಾಯಕರು ಇದ್ದಾರೆ. ನಾನೇ ಎಂದು ನೀವ್ಯಾತಕ್ಕೆ ಅಂದುಕೊಳ್ಳುತ್ತಿದ್ದೀರಿ, ಆ ಮಹಾನಾಯಕ ಬಿಜೆಪಿ ಪಕ್ಷದಲ್ಲೂ ಇರಬಹುದು ಕಾಂಗ್ರೇಸ್ ಪಕ್ಷದಲ್ಲೂ ಇರಬಹುದು. ನಾನು ಎಲ್ಲಿಯೂ ಮಹಾನಾಯಕನ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ನುಡಿದರು.
ಕೋಲಾರದ ಮುನೇಶ್ವರ ನಗರದಲ್ಲಿ ಜಿಡಿಎಸ್ ಕಾರ್ಯಕರ್ತರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಸೋಮವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ್ಲೇ ರಾಜ್ಯ ಸರ್ಕಾರ ಬೆಳಗಾವಿ ಗಡಿ ಖ್ಯಾತೆಯ ವಿಚಾರವನ್ನು ಮುನ್ನಲೆಗೆ ತಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸದ್ದುಮಾಡುತ್ತಿರುವ ಸೆಕ್ಸ್‍ಸಿಡಿ ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಬೆಳಗಾವಿ ಗಡಿಯ ವಿಚಾರ ವ್ಯವಸ್ಥಿತವಾಗಿ ಸಂಜು ರೂಪಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ವಿಜಯವಾಣಿ ಸುದ್ದಿಜಾಲ ಕೋಲಾರ