ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮ

ctd ----00001
Published on

ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘದಿಂದ ಈಚೆಗೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಗಮಕ ವಾಚನ, ವ್ಯಾಖ್ಯಾನ ಕಾರ‌್ಯಕ್ರಮ ಏರ್ಪಡಿಸಲಾಗಿತ್ತು.
ಕುಮಾರವ್ಯಾಸ ಭಾರತ, ಕುರುಕ್ಷೇತ್ರ ಯುದ್ಧದ ಸಂಧಾನ ಪ್ರಸಂಗದ ವಾಚನ ಮತ್ತು ವ್ಯಾಖ್ಯಾನಗಳನ್ನು ಗಮಕಿಗಳಾದ ಅನಂತಕೃಷ್ಣ ಮತ್ತು ಚಂಪಕಾ ಶ್ರೀಧರ್ ನಡೆಸಿಕೊಟ್ಟರು. ಸಂಘದ ಅಧ್ಯಕ್ಷೆ ರಮಾದೇವಿ ಕೆ. ವೆಂಕಣ್ಣಾಚಾರ್ ಮಾತನಾಡಿದರು. ನಿರ್ದೇಶಕಿ ಸುಶೀಲಾ ಪ್ರಸಾದ್ ಸ್ವಾಗತಿಸಿದರು. ನಿರ್ದೇಶಕಿ ಬಿ.ಎಲ್. ಉಮಾ ವಂದಿಸಿದರು. ಶಶಿಧರ ಶ್ಯಾನಭಾಗ್ ನಿರೂಪಿಸಿದರು. ಜೆಸಿಆರ್ ಬಡಾವಣೆ ಮಾರುತಿ ಭಜನಾ ಮಂಡಳಿ ಸದಸ್ಯರು ಗಮಕ ಪ್ರಾರ್ಥನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net