ಗಮಕ ಕಾರ‌್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ಪುಣ್ಯದ ಕೆಲಸ

IMG-20231218-WA0007--03
Published on

ಚಿತ್ರದುರ್ಗ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ನಮಗೆ ದೊರೆಯುವ ಅತ್ಯುತ್ತಮ ಸದಾವಕಾಶ ಗಳಲ್ಲಿ ಒಂದಾಗಿದೆ ಎಂದು ನಗರದ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ಅವರು ಹೇ ಳಿದರು.
ನಗರದ ಗಮಕ ಕಲಾಭಿಮಾನಿಗಳ ಸಂಘ ಹಾಗೂ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ಭಾನುವಾರ ಜೆಸಿ ಆ ರ್ ಗಣಪತಿ ದೇವಾಲಯದಲ್ಲಿ ಏರ್ಪಡಿಸಿದ್ದ ಮಾಸಿಕ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಥ ಕಾ ರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ಒಂದು ಪುಣ್ಯದ ಕೆಲಸವೆಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ರೆಡ್ಡಿ ಅವರನ್ನು ಸನ್ಮಾನಿಸ ಲಾಯಿತು.
ಶಿವಮೊಗ್ಗ ಹೊಸಳ್ಳಿಯ ಪ್ರಸಾದ್‌ಭಾರಧ್ವಾಜ್ ಅವರು ರಾಮಾಯಣ ಕಾವ್ಯದ ಸೀತಾನ್ವೇಷಣೆ ಭಾಗವನ್ನು ವಾಚಿಸಿದರು. ಚಿಕ್ಕಮಗ ಳೂರಿನ ಗಮಕಿ ರಾಮಸುಬ್ರಾಯ ಶೇಟ್ ವ್ಯಾಖ್ಯಾನ ಮಾಡಿದರು. ಜೆಸಿಆರ್ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಜಿ.ಆರ್.ಕೃಷ್ಣಮೂರ್ತಿ, ಸಂಘದ ಅಧ್ಯಕ್ಷೆ ಕೆ .ಆರ್.ರಮಾದೇವಿ ಇದ್ದರು. ಡಾ.ರೋಜಾ ಪ್ರಾರ್ಥಿಸಿದರು. ಶಶಿಧರ್ ನಿರೂಪಿಸಿ, ಮೀನಾಕ್ಷಿ ಭಟ್ ವಂದಿಸಿ ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net