ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘ ಜೂ.23ರ ಸಂಜೆ 6 ಗಂಟೆಗೆ ಜೆಸಿಆರ್ ಗಣಪತಿ ದೇವಾಲಯದಲ್ಲಿ ಗಮಕ ಕಾರ್ಯಕ್ರಮ ಏರ್ಪಡಿಸಿದೆ. ಚಿತ್ರದುರ್ಗದ ಸಂಯುಕ್ತಾ ಜಮದಗ್ನಿ ಹಾಗೂ ಮನೋಜ್ಞ ಜಮದಗ್ನಿ ಕಾರ್ಯಕ್ರಮ ನಡೆಸಿಕೊಡುವರು. ಗಣಪತಿ ದೇವಾಲಯ ಸಮಿತಿ ಕಾರ್ಯದರ್ಶಿ ಮುರುಗೇಶ ಗೌಡ್ರು ಮುಖ್ಯ ಅತಿಥಿಗಳಾಗಿ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.